ಸಾವಿರಾರು ಉನ್ನತ ವೇತನದ ಹುದ್ದೆ ವಲಸಿಗರಿಗೆ: ಫೇಸ್‌ಬುಕ್ ವಿರುದ್ಧ ಟ್ರಂಪ್ ಸರಕಾರ ಮೊಕದ್ದಮೆ

Update: 2020-12-04 17:41 GMT

ವಾಶಿಂಗ್ಟನ್, ಡಿ. 4: ಸಾವಿರಾರು ಉನ್ನತ ವೇತನದ ಹುದ್ದೆಗಳನ್ನು ವಲಸಿಗರಿಗೆ ನೀಡುವ ಮೂಲಕ ಫೇಸ್‌ಬುಕ್ ಅಮೆರಿಕನ್ನರ ವಿರುದ್ಧ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಡೊನಾಲ್ಡ್ ಟ್ರಂಪ್ ಆಡಳಿತವು ಅದರ ವಿರುದ್ಧ ಗುರುವಾರ ಮೊಕದ್ದಮೆ ಹೂಡಿದೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಅಧಿಕಾರದ ಕೊನೆಯ ವಾರಗಳಲ್ಲಿರುವಂತೆಯೇ, ಅಮೆರಿಕದ ಕಾನೂನು ಇಲಾಖೆಯು ತಂತ್ರಜ್ಞಾನ ಕಂಪೆನಿಗಳು ಹಾಗೂ ಆ ಮೂಲಕ ವಲಸಿಗರ ವಿರುದ್ಧ ಮತ್ತೆ ದಮನ ಕಾರ್ಯಾಚರಣೆ ಆರಂಭಿಸಿದೆ.

2018 ಜನವರಿಯಿಂದ 2019 ಸೆಪ್ಟಂಬರ್‌ವರೆಗಿನ ಅವಧಿಯಲ್ಲಿ ಫೇಸ್‌ಬುಕ್ ಕಂಪೆನಿಯು ಸರಾಸರಿ ಸುಮಾರು 1,56,000 ಡಾಲರ್ (ಸುಮಾರು 1.15 ಕೋಟಿ ರೂಪಾಯಿ) ವೇತನದೊಂದಿಗೆ 2,600ಕ್ಕೂ ಅಧಿಕ ಹುದ್ದೆಗಳನ್ನು ವಲಸಿಗರಿಗೆ ನೀಡಿರುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಫೇಸ್‌ಬುಕ್ ತನ್ನ ಉದ್ಯೋಗಾವಕಾಶಗಳ ವೆಬ್‌ಸೈಟ್‌ನಲ್ಲಿ ಜಾಹೀರಾತುಗಳನ್ನು ಹಾಕದೆ, ಎಚ್-1ಬಿ ವೀಸಾದಾರರಿಗೆ ನೇರವಾಗಿ ಉದ್ಯೋಗಗಳನ್ನು ನೀಡಿದೆ ಎಂದು ಮೊಕದ್ದಮೆಯಲ್ಲಿ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News