ನೂತನ ಸಂಸತ್ ಕಟ್ಟಡಕ್ಕೆ ಡಿ.10ರಂದು ಪ್ರಧಾನಿ ಶಂಕು ಸ್ಥಾಪನೆ
Update: 2020-12-05 23:09 IST
ಹೊಸದಿಲ್ಲಿ, ಡಿ. 5: ಹೊಸದಿಲ್ಲಿಯಲ್ಲಿ ನೂತನ ಸಂಸತ್ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 10ರಂದು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ನೂತನ ಸಂಸತ್ ಕಟ್ಟಡದ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭವಾಗಲಿದೆ. 2022 ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳಲಿದೆ. 60,000 ಸ್ಕ್ವಾರ್ ಮೀಟರ್ ಪ್ರದೇಶದಲ್ಲಿ ಈ ಸಂಸತ್ ಕಟ್ಟಡ ನಿರ್ಮಾಣವಾಗಲಿದೆ.