ವೆನೆಝುವೆಲಕ್ಕೆ ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ಇಂಧನ ಸಾಗಾಟ?

Update: 2020-12-06 17:33 GMT

ಟೆಹರಾನ್ (ಇರಾನ್), ಡಿ. 6: ಅಮೆರಿಕದ ದಿಗ್ಬಂಧನಗಳನ್ನು ಧಿಕ್ಕರಿಸಿ, ಇರಾನ್ ವೆನೆಝುವೆಲ ದೇಶಕ್ಕೆ ಬೃಹತ್ ಪ್ರಮಾಣದ ಪೆಟ್ರೋಲಿಯಂ ಉತ್ಪನ್ನಗಳನ್ನು ಕಳುಹಿಸುತ್ತಿದೆ ಎಂದು ಬಲ್ಲ ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಮ್‌ಬರ್ಗ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮುಖ್ಯವಾಹಿನಿಯಿಂದ ಹೊರಗಿರುವ ವೆನೆಝುವೆಲವು ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿದೆ ಹಾಗೂ ಕೊರತೆಯನ್ನು ನೀಗಿಸುವುದಕ್ಕಾಗಿ ಇರಾನ್‌ನ ಸುಮಾರು 10 ಹಡಗು ಟ್ಯಾಂಕರ್‌ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಿಸುತ್ತಿವೆ ಎನ್ನಲಾಗಿದೆ. ಈ ಟ್ಯಾಂಕರ್‌ಗಳು ವೆನೆಝುವೆಲದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಇಳಿಸಿದ ಬಳಿಕ, ಅಲ್ಲಿನ ಕಚ್ಚಾತೈಲವನ್ನು ರಫ್ತು ಮಾಡಲೂ ಸಹಾಯ ಮಾಡಲಿವೆ ಎಂದು ಮೂಲಗಳು ಹೇಳಿವೆ.

ವೆನೆಝುವೆಲದೊಂದಿಗಿನ ಅಂತರ್‌ರಾಷ್ಟ್ರೀಯ ವ್ಯಾಪಾರದ ಮೇಲೆ ಅಮೆರಿಕ ವಿಧಿಸಿರುವ ನಿಷೇಧವನ್ನು ಪಾಲಿಸಲು ರಶ್ಯ ಮತ್ತು ಚೀನಾಗಳೂ ಮುಂದಾಗಿದ್ದು, ವೆನೆಝುವೆಲವು ಇರಾನನ್ನು ಸಂಪೂರ್ಣವಾಗಿ ಅವಲಂಬಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News