ಜರ್ಮನಿ: 2ನೇ ಮಹಾಯುದ್ಧ ಕಾಲದ ಬಾಂಬ್ ನಿಷ್ಕ್ರಿಯ

Update: 2020-12-06 17:36 GMT

ಬರ್ಲಿನ್ (ಜರ್ಮನಿ), ಡಿ. 6: ಜರ್ಮನಿಯ ಫ್ರಾಂಕ್‌ಫರ್ಟ್ ನಗರದಲ್ಲಿ ರವಿವಾರ ಎರಡನೇ ಮಹಾಯುದ್ಧದ ಅವಧಿಯ ಸ್ಫೋಟಿಸದ ಬಾಂಬೊಂದನ್ನು ಪರಿಣತರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 13,000 ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.

500 ಕಿಲೋಗ್ರಾಮ್ ತೂಕದ ಬ್ರಿಟಿಶ್ ಬಾಂಬ್ ಜರ್ಮನಿಯ ಆರ್ಥಿಕ ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ವೇಳೆ ಗುರುವಾರ ಪತ್ತೆಯಾಗಿತ್ತು ಎಂದು ತುರ್ತು ಸೇವೆಗಳ ಇಲಾಖೆ ತಿಳಿಸಿದೆ.

ಬಾಂಬನ್ನು ನಿಷ್ಕ್ರಿಯಗೊಳಿಸುವ ಮುನ್ನ 700 ಮೀಟರ್ ತ್ರಿಜ್ಯದ ತೆರವು ವಲಯವನ್ನು ಗುರುತಿಸಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.

ಎರಡನೇ ಮಹಾಯುದ್ಧ ಮುಗಿದು 75 ವರ್ಷ ಕಳೆದರೂ ಜರ್ಮನಿಯಲ್ಲಿ ಸ್ಫೋಟಿಸದೆ ಉಳಿದಿರುವ ಬಾಂಬ್‌ಗಳು ಕಟ್ಟಡ ನಿರ್ಮಾಣ ಕಾಮಗಾರಿಗಳ ವೇಳೆ ಆಗಾಗ ಪತ್ತೆಯಾಗುತ್ತಿವೆ.

ಈ ವರ್ಷದ ಆರಂಭದಲ್ಲಿ ಬರ್ಲಿನ್‌ನ ಹೊರವಲಯದಲ್ಲಿ ಎರಡನೇ ಮಹಾಯುದ್ಧ ಕಾಲದ 7 ಬಾಂಬ್‌ಗಳನ್ನು ಪರಿಣತರು ನಿಷ್ಕ್ರಿಯಗೊಳಿಸಿದ್ದಾರೆ. ಇದೇ ವರ್ಷ ಕೊಲೋನ್ ಮತ್ತು ಡಾರ್ಟ್‌ಮಂಡ್ ನಗರಗಳಲ್ಲೂ ಬೃಹತ್ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News