×
Ad

ಪ್ರಪಂಚದಾದ್ಯಂತ ಪತ್ತೆಯಾದ ಏಕಶಿಲೆ ರಹಸ್ಯ ಬಯಲು

Update: 2020-12-06 23:46 IST

ನ್ಯೂಯಾರ್ಕ್: ಪ್ರಪಂಚದಾದ್ಯಂತ ಪತ್ತೆಯಾದ ಲೋಹದ ಏಕಶಿಲೆಗಳನ್ನು ಮರೆಮಾಚುವ ರಹಸ್ಯವು ಬಹಿರಂಗಗೊಂಡಿದ್ದು, ನ್ಯೂ ಮೆಕ್ಸಿಕೊ ಕಲಾವಿದರು ಇದರ ಸಾಮೂಹಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ನವೆಂಬರ್ 18 ರಂದು ವನ್ಯಜೀವಿ ಅಧಿಕಾರಿಗಳು ಉಟಾಹ್ ಮರುಭೂಮಿಯಲ್ಲಿ 10 ಅಡಿಯ ಏಕಶಿಲೆಯನ್ನು ಪತ್ತೆ ಮಾಡಿದರು. ಸುಮಾರು ಎರಡು ವಾರಗಳ ನಂತರ ಉತ್ತರ ರೊಮಾನಿಯದ ಪಿಯಾಟ್ರಾ ನೀಮ್ಸ್ ನಗರದಲ್ಲಿ ಇದೇ ರೀತಿಯ ಏಕಶಿಲೆ ಕಂಡುಬಂದಿತ್ತು.

ಮೂರನೇ ರಚನೆಯು ಕ್ಯಾಲಿಫೋರ್ನಿಯಾದ ಪೈನ್ ಪರ್ವತದ ಮೇಲ್ಭಾಗದಲ್ಲಿ ಬುಧವಾರ ಕಾಣಿಸಿಕೊಂಡಿತು.ಈ ಮೂರು ಏಕ ಶಿಲೆಗಳನ್ನು ಬಳಿಕ ತೆಗೆಯಲಾಗಿತ್ತು ಅಥವಾ ಕಾಣೆಯಾಗಿದ್ದವು. ಅನ್ಯಗೃಹದ ಜೀವಿಗಳು ಇದರ ಹಿಂದಿವೆ ಎಂಬ ಊಹಾಪೋಹ ಕೇಳಿಬಂದಿತ್ತು.

ಇದೀಗ ಮೆಕ್ಸಿಕೊದ ಪ್ರಸಿದ್ಧ ಕಲಾವಿದರ ತಂಡವು ಈ ಮೂರು ಏಕಶಿಲೆಯನ್ನು ಸ್ಥಾಪಿಸಿರುವ ಶ್ರೇಯಸ್ಸನ್ನು ಪಡೆದಿದ್ದಾರೆ. ಅವುಗಳನ್ನು 45,000 ಡಾಲರ್ ಗೆ ಮಾರಾಟ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News