×
Ad

ಕಳೆದ ತಿಂಗಳು ಐರೋಪ್ಯ ಒಕ್ಕೂಟದ ಅತ್ಯಂತ ಬಿಸಿ ನವೆಂಬರ್

Update: 2020-12-07 22:16 IST

ಪ್ಯಾರಿಸ್ (ಫ್ರಾನ್ಸ್), ಡಿ. 7: ದಾಖಲಾಗಿರುವ ಇತಿಹಾಸದಲ್ಲೇ ಕಳೆದ ತಿಂಗಳು ಅತ್ಯಂತ ಬಿಸಿ ನವೆಂಬರ್ ಆಗಿತ್ತು ಎಂದು ಯುರೋಪಿಯನ್ ಒಕ್ಕೂಟದ ಉಪಗ್ರಹ ನಿಗಾ ಸೇವೆ ಸೋಮವಾರ ತಿಳಿಸಿದೆ.

2020ರ ನವೆಂಬರ್ 1981ರಿಂದ 2010ರವರೆಗಿನ 30 ವರ್ಷಗಳ ಸರಾಸರಿಗಿಂತ 0.8 ಡಿಗ್ರಿ ಸೆಲ್ಸಿಯಸ್ ಹೆಚ್ಚು ಬಿಸಿಯಾಗಿತ್ತು ಎಂದು ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್‌ನ ವಿಶ್ಲೇಷಣೆ ತಿಳಿಸಿದೆ.

‘‘ಈ ದಾಖಲೆಗಳು ಜಾಗತಿಕ ಹವಾಮಾನದ ದೀರ್ಘಾವಧಿಯ ಉಷ್ಣ ಪ್ರವೃತ್ತಿಗೆ ಅನುಗುಣವಾಗಿದೆ’’ ಎಂದು ಕೋಪರ್ನಿಕಸ್ ಕ್ಲೈಮೇಟ್ ಚೇಂಜ್ ಸರ್ವಿಸ್‌ನ ನಿರ್ದೇಶಕ ಕಾರ್ಲೊ ಬೋನ್‌ಟೆಂಪೊ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News