×
Ad

ಅವ್ಯವಹಾರದಲ್ಲಿ ಅಮೆರಿಕ ತೃತೀಯ ಜಗತ್ತಿನ ದೇಶದಂತಾಗಿದೆ

Update: 2020-12-08 23:05 IST

ವಾಶಿಂಗ್ಟನ್, ಡಿ. 8: ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ತನ್ನ ಆಧಾರರಹಿತ ಆರೋಪಗಳನ್ನು ಪುನರುಚ್ಚರಿಸಿರುವ ಅಮೆರಿಕದ ನಿರ್ಗಮನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತನ್ನ ದೇಶವನ್ನು ತೃತೀಯ ಜಗತ್ತಿನ ದೇಶಕ್ಕೆ ಹೋಲಿಸಿದ್ದಾರೆ.

‘‘ಈ ಬಾರಿ ನಡೆದ ಚುನಾವಣೆಯು ದೇಶಕ್ಕೆ ಅವಮಾನಕಾರಿ’’ ಎಂದು ಸೋಮವಾರ ಕುಸ್ತಿಪಟು ಹಾಗೂ ಕೋಚ್ ಡ್ಯಾನ್ ಗ್ಯಾಬಲ್‌ಗೆ ‘ಅಧ್ಯಕ್ಷೀಯ ಸ್ವಾತಂತ್ರ್ಯ ಪದಕ’ವನ್ನು ನೀಡುವ ಸಮಾರಂಭದ ವೇಳೆ ಶ್ವೇತಭವನದ ಓವಲ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.

‘‘ನಮ್ಮ ದೇಶ ಈಗ ತೃತಿಯ ಜಗತ್ತಿನ ದೇಶವೊಂದರಂತೆ ಆಗಿದೆ. ಈ ಮತಪತ್ರಗಳು ಯಂತ್ರಗಳಿಂದ ಎಲ್ಲಾ ಕಡೆಗಳಿಂದಲೂ ಬರುತ್ತಿದ್ದವು. ಆ ಯಂತ್ರಗಳು ಯಾರದು ಎನ್ನುವುದು ಯಾರಿಗೂ ಗೊತ್ತಿಲ್ಲ. ಅವುಗಳ ಬಗ್ಗೆ ಯಾರಿಗೂ ಏನೂ ಗೊತ್ತಿಲ್ಲ. ಅವುಗಳು ನನ್ನ ವಿರುದ್ಧ ಸಾವಿರಾರು ಮತಗಳನ್ನು ಹೊರ ಕಳುಹಿಸುತ್ತಿದ್ದವು’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News