ಅಮೆರಿಕದಿಂದ ಭಾರತಕ್ಕೆ ಶಸ್ತ್ರ ಮಾರಾಟದಲ್ಲಿ ಅಗಾಧ ಹೆಚ್ಚಳ

Update: 2020-12-09 18:15 GMT

ವಾಶಿಂಗ್ಟನ್, ಡಿ. 9: ಭಾರತಕ್ಕೆ ಅಮೆರಿಕದ ಶಸ್ತ್ರಾಸ್ತ್ರ ಮಾರಾಟವು ಕನಿಷ್ಠ 6.2 ಮಿಲಿಯ ಡಾಲರ್ (ಸುಮಾರು 45 ಕೋಟಿ ರೂಪಾಯಿ)ನಿಂದ ಡೊನಾಲ್ಡ್ ಟ್ರಂಪ್ ಆಡಳಿತದ ಕೊನೆಯ ವರ್ಷದಲ್ಲಿ ಬೃಹತ್ 3.4 ಬಿಲಿಯ ಡಾಲರ್ (ಸುಮಾರು 25,050 ಕೋಟಿ ರೂಪಾಯಿ)ಗೆ ನೆಗೆದಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.

ಇತರ ದೇಶಗಳಿಗೆ ಅಮೆರಿಕದ ಶಸ್ತ್ರಾಸ್ತ್ರಗಳ ಮಾರಾಟವು 2019ರಲ್ಲಿದ್ದ 55.7 ಬಿಲಿಯ ಡಾಲರ್ (ಸುಮಾರು 4.10 ಲಕ್ಷ ಕೋಟಿ ರೂಪಾಯಿ)ನಿಂದ 2020ರಲ್ಲಿ 50.8 ಬಿಲಿಯ ಡಾಲರ್ (ಸುಮಾರು 3.74 ಲಕ್ಷ ಕೋಟಿ ರೂಪಾಯಿ)ಗೆ ಇಳಿದ ಸಂದರ್ಭದಲ್ಲಿ, ಭಾರತಕ್ಕೆ ಅದರ ಶಸ್ತ್ರಾಸ್ತ್ರಗಳ ಮಾರಾಟದಲ್ಲಿ ಈ ಅಗಾಧ ಹೆಚ್ಚಳ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News