ಎಕೆ ವರ್ಸಸ್ ಎಕೆ ಚಿತ್ರದ ದೃಶ್ಯಗಳ ಕತ್ತರಿಗೆ ವಾಯುಪಡೆ ಆಗ್ರಹ

Update: 2020-12-09 18:15 GMT

ಹೊಸದಿಲ್ಲಿ, ಡಿ.9: ಶೀಘ್ರದಲ್ಲೇ ಬಿಡುಗಡೆಗೊಳ್ಳಲಿರುವ ನೆಟ್‌ಫ್ಲಿಕ್ಸ್ ಚಿತ್ರ ‘‘ಎಕೆ ವರ್ಸಸ್ ಎಕೆ’ ಚಿತ್ರದ ಕೆಲವು ದೃಶ್ಯಗಳನ್ನು ಪ್ರಸಾರ ಮಾಡುವುದರಿಂದ ಹಿಂತೆಗೆದುಕೊಳ್ಳಬೇಕೆಂದು ಭಾರತೀಯ ವಾಯುಪಡೆ (ಐಎಎಫ್) ಆಗ್ರಹಿಸಿದೆ. ಬಾಲಿವುಡ್ ನಟ ಅನಿಲ್‌ ಕಪೂರ್ ಚಿತ್ರದ ಟೀಸರ್ ಅನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ ಬಳಿಕ ಭಾರತೀಯ ವಾಯುಪಡೆ ಈ ಹೇಳಿಕೆ ನೀಡಿದೆ.

‘‘ಈ ವೀಡಿಯೊದಲ್ಲಿ ಐಎಎಫ್‌ನ ಸಮವಸ್ತ್ರವನ್ನು ತಪ್ಪಾಗಿ ತೋರಿಸಲಾಗಿದೆ ಹಾಗೂ ಬಳಸಲಾದ ಭಾಷೆಯು ಅಸಮರ್ಪಕವಾಗಿದೆ’’ ಎಂದು ಭಾರತೀಯ ವಾಯುಪಡೆ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ ತಿಳಿಸಿದೆ. ಈ ಸಿನೆಮಾದ ವೀಡಿಯೊ ಭಾರತದ ಸಶಸ್ತ್ರಪಡೆಗಳ ಶಿಷ್ಟಾಚಾರ, ಪ್ರವೃತ್ತಿಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ದೃಶ್ಯಗಳನ್ನು ಹಿಂತೆಗೆದುಕೊಳ್ಳಬೇಕೆಂದು ಅದು ಆಗ್ರಹಿಸಿದೆ.

ವಿಕ್ರಮಾದಿತ್ಯ ಮೊಟ್ವಾನೆ ನಿರ್ದೇಶನದ ‘ಎಕೆ ವರ್ಸಸ್ ಎಕೆ ’ಚಿತ್ರದಲ್ಲಿ ಅನುರಾಗ್ ಕಶ್ಯಪ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಡಿಸೆಂಬರ್ 24ರಂದು ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News