ಖಶೋಗಿ ಹತ್ಯೆಯ ದಾಖಲೆ ಬಹಿರಂಗಪಡಿಸಲು ನ್ಯಾಯಾಧೀಶ ಆದೇಶ

Update: 2020-12-09 18:21 GMT

ನ್ಯೂಯಾರ್ಕ್, ಡಿ. 9: ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿ ಹತ್ಯೆಯ ಟೇಪ್ ರೆಕಾರ್ಡಿಂಗ್ ತಮ್ಮ ಬಳಿ ಇದೆ ಎನ್ನುವುದನ್ನು ಒಪ್ಪಿಕೊಳ್ಳುವಂತೆ ನ್ಯೂಯಾರ್ಕ್‌ನ ನ್ಯಾಯಾಧೀಶರೊಬ್ಬರು ಮಂಗಳವಾರ ಅಮೆರಿಕದ ಗುಪ್ತಚರ ಸಂಸ್ಥೆಗಳಿಗೆ ಆದೇಶ ನೀಡಿದ್ದಾರೆ.

2018 ಅಕ್ಟೋಬರ್ 2ರಂದು ನಡೆದ ಹತ್ಯೆಯ ಕುರಿತ ಸಿಐಎ ವರದಿ ಮತ್ತು ಟೇಪನ್ನು ನೀವು ಯಾಕೆ ತಡೆಹಿಡಿದಿದ್ದೀರಿ ಎನ್ನುವುದನ್ನು ವಿವರಿಸುವಂತೆಯೂ ಫೆಡರಲ್ ನ್ಯಾಯಾಧೀಶ ಪೌಲ್ ಎಂಜಲ್‌ಮಯರ್ ಸೆಂಟ್ರಲ್ ಇಂಟಲಿಜನ್ಸ್ ಏಜೆನ್ಸಿ (ಸಿಐಎ) ಮತ್ತು ರಾಷ್ಟ್ರೀಯ ಗುಪ್ತಚರ ನಿರ್ದೇಶಕರ ಕಚೇರಿ (ಒಡಿಎನ್‌ಐ)ಗೆ ಸೂಚನೆ ನೀಡಿದ್ದಾರೆ.

ಸೌದಿ ಅರೇಬಿಯದ ಗುಪ್ತಚರ ಇಲಾಖೆಯ ಸಿಬ್ಬಂದಿಗಳೆನ್ನಲಾದ ಹಂತಕರ ತಂಡವೊಂದು ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಅಂಕಣಕಾರ ಖಶೋಗಿಯನ್ನು ಬರ್ಬರವಾಗಿ ಕೊಂದಿತ್ತು.

ಈ ತೀರ್ಪನ್ನು ಮಾನವಹಕ್ಕುಗಳ ಹೋರಾಟಗಾರರು ಸ್ವಾಗತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News