×
Ad

ಸೂಪರ್ ಮ್ಯಾನ್ ರೀತಿ ಹಾರಿ ಆರು ರನ್ ಉಳಿಸಿದ ಫೀಲ್ಡರ್: ವೀಡಿಯೊ ವೈರಲ್

Update: 2020-12-10 22:59 IST

ಸಿಡ್ನಿ: ಬಿಗ್ ಬ್ಯಾಶ್ ಲೀಗ್ (ಬಿಬಿಎಲ್)ಟ್ವೆಂಟಿ-20 ಟೂರ್ನಿಯಲ್ಲಿ ಮಿಡ್ ವಿಕೆಟ್ ನಲ್ಲಿ ಫೀಲ್ಡಿಂಗ್ ನಿರತವಾಗಿದ್ದ ಸಿಡ್ನಿಸಿಕ್ಸರ್ ತಂಡದ ಫೀಲ್ಡರ್ ಜೋರ್ಡನ್ ಸಿಲ್ಕ್ ಹೊಬರ್ಟ್ ಹ್ಯುರಿಕೇನ್ಸ್ ತಂಡದ ಕಾಲಿನ್ ಇಂಗ್ರಾಮ್ ಬಾರಿಸಿದ ಚೆಂಡನ್ನು ಸೂಪರ್ ಮ್ಯಾನ್ ರೀತಿ ಮೇಲಕ್ಕೆ ಹಾರಿ ತಡೆದರು. ಈ ಮೂಲಕ ಸಿಡ್ನಿ ತಂಡಕ್ಕೆ ಆರು ರನ್ ಉಳಿಸಿದರು.

ಸಿಲ್ಕ್ ಅವರು ಬೌಂಡರಿ ಗೆರೆ ಆಚೆ ಬೀಳುವ ಮೊದಲು ಬಲಗೈಯಲ್ಲಿ ಚೆಂಡನ್ನು ಹಿಡಿದು ಮೈದಾನದೊಳಗೆ ಎಸೆದರು. ಜೋರ್ಡನ್ ಸೂಪರ್ ಮ್ಯಾನ್ ತರಹ ಹಾರಿದ್ದಾರೆ ಎಂದು ವೀಕ್ಷಕವಿವರಣೆಗಾರ ಆ್ಯಡಮ್ ಗಿಲ್ ಕ್ರಿಸ್ಟ್ ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News