ರೈತರ ಹೋರಾಟ ಬೆಂಬಲಿಸಿ ಒಂದು ದಿನ ಉಪವಾಸ: ಅರವಿಂದ್ ಕೇಜ್ರಿವಾಲ್

Update: 2020-12-13 12:20 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯ ಹೊರವಲಯದಲ್ಲಿ ಕಳೆದ ಕೆಲವು ದಿನಗಳಿಂದ ಕೇಂದ್ರ ಸರಕಾರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಸೋಮವಾರ ಉಪವಾಸ ಮಾಡುವುದಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಹೇಳಿದ್ದಾರೆ.

ರೈತರ ಪ್ರತಿಭಟನೆಗೆ ಬೆಂಬಲವಾಗಿ ನಾನು ಸೋಮವಾರ ಒಂದು ದಿನದ ಮಟ್ಟಿಗೆ ಉಪವಾಸ ನಡೆಸುವೆ. ನನ್ನೊಂದಿಗೆ ಕೈಜೋಡಿಸುವಂತೆ ಎಎಪಿ ಸ್ವಯಂಸೇವಕರಲ್ಲಿ ನಾನು ವಿನಂತಿಸುವೆ.ಕೇಂದ್ರ ಸರಕಾರವು ರೈತರ ಎಲ್ಲ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು.ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ)ಖಾತ್ರಿಪಡಿಸುವ ಮಸೂದೆಯೊಂದನ್ನು ತರಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪ್ರತಿಯೊಬ್ಬರೂ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ಒಂದು ದಿನ ಉಪವಾಸ ಮಾಡಬೇಕೆಂದು ನಾನು ಮನವಿ ಮಾಡುತ್ತೇನೆ. ಈ ಹೊಸ ಕಾನೂನುಗಳು ದೇಶಕ್ಕೆ ಹಾನಿಕರವಾಗಿದೆ. ಈ ಕಾನೂನು ಬೆಲೆ ಏರಲು ಸಹಾಯ ಮಾಡುತ್ತವೆ ಎಂದು ಕೇಜ್ರಿವಾಲ್ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News