ಎಸ್ವಟಿನಿ ದೇಶದ ಪ್ರಧಾನಿ ಕೊರೋನಗೆ ಬಲಿ

Update: 2020-12-14 17:07 GMT
ಪ್ರಧಾನಿ ಆ್ಯಂಬ್ರೋಸ್ ಡ್ಲಾಮಿನಿ 

ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕ), ಡಿ. 14: ಆಫ್ರಿಕ ಖಂಡದ ದಕ್ಷಿಣ ಭಾಗದಲ್ಲಿರುವ ಎಸ್ವಟಿನಿ ಎಂಬ ಸಣ್ಣ ದೇಶದ ಪ್ರಧಾನಿ ಆ್ಯಂಬ್ರೋಸ್ ಡ್ಲಾಮಿನಿ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು.

ನಾಲ್ಕು ವಾರಗಳ ಹಿಂದೆ ಕೊರೋನ ವೈರಸ್‌ಗೆ ಗುರಿಯಾಗಿದ್ದ ಅವರನ್ನು ನೆರೆಯ ದಕ್ಷಿಣ ಆಫ್ರಿಕ ದೇಶದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಅವರು ಅಲ್ಲೇ ಮೃತಪಟ್ಟಿದ್ದಾರೆ ಎಂದು ಎಸ್ವಟಿನಿಯ ರಾಜಪ್ರಭುತ್ವದ ಸರಕಾರ ರವಿವಾರ ತಿಳಿಸಿದೆ.

ಅವರ ಸ್ಥಿತಿ ಬಿಗಡಾಯಿಸಿದಾಗ ಡಿಸೆಂಬರ್ 1ರಂದು ಅವರನ್ನು ದಕ್ಷಿಣ ಆಫ್ರಿಕಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಅವರನ್ನು 2018 ನವೆಂಬರ್‌ನಲ್ಲಿ ಪ್ರಧಾನಿಯಾಗಿ ನೇಮಿಸಲಾಗಿತ್ತು.

ಸ್ವಾಝಿಲ್ಯಾಂಡ್ ಎಂಬುದಾಗಿ ಸಾಮಾನ್ಯವಾಗಿ ಕರೆಯಲ್ಪಡುವ ಎಸ್ವಟಿನಿ ಸುಮಾರು 12 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ಅಲ್ಲಿ 6,768 ಕೊರೋನ ಸೋಂಕು ಪ್ರಕರಣಗಳು ದಾಖಲಾಗಿದ್ದು, 127 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News