2 ವರ್ಷಗಳ ಬಳಿಕ ಇಸ್ರೇಲ್‌ಗೆ ರಾಯಭಾರಿ ನೇಮಿಸಿದ ಟರ್ಕಿ

Update: 2020-12-14 17:59 GMT
ಫೋಟೊ ಕೃಪೆ: twitter

ಅಂಕಾರ (ಟರ್ಕಿ), ಡಿ. 14: ಎರಡು ವರ್ಷಗಳ ಅನುಪಸ್ಥಿತಿಯ ಬಳಿಕ ಟರ್ಕಿ, ಇಸ್ರೇಲ್‌ಗೆ ಹೊಸ ರಾಯಭಾರಿಯನ್ನು ನೇಮಿಸಿದೆ ಎಂದು ವರದಿಗಳು ತಿಳಿಸಿವೆ.

 ಆಕ್ರಮಿತ ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನಿಯರ ವಿರುದ್ಧ ಇಸ್ರೇಲ್ ನಡೆಸಿದ ಭೀಕರ ದಾಳಿಗಳ ಹಿನ್ನೆಲೆಯಲ್ಲಿ, 2018 ಮೇ ತಿಂಗಳಲ್ಲಿ ಟರ್ಕಿ ತನ್ನ ಇಸ್ರೇಲ್ ರಾಯಭಾರಿಯನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಇಸ್ರೇಲ್‌ನಲ್ಲಿರುವ ಅವೆುರಿಕದ ರಾಯಭಾರ ಕಚೇರಿಯನ್ನು ಟೆಲ್ ಅವೀವ್‌ನಿಂದ ಜೆರುಸಲೇಮ್‌ಗೆ ಸ್ಥಳಾಂತರಿಸುವುದನ್ನು ಆಗ ಫೆಲೆಸ್ತೀನಿಯರು ಪ್ರತಿಭಟಿಸುತ್ತಿದ್ದರು.

ಮುಂಬರುವ ಜೋ ಬೈಡನ್ ಸರಕಾರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದುವ ಉದ್ದೇಶದಿಂದ ಟರ್ಕಿಯು ಇಸ್ರೇಲ್‌ಗೆ ನೂತನ ರಾಯಭಾರಿಯನ್ನು ನೇಮಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಅಲ್-ಮೋನಿಟರ್’ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News