ಅರ್ಜುನ್ ರಾಂಪಾಲ್‌ಗೆ ಮತ್ತೊಮ್ಮೆ ಸಮನ್ಸ್ ನೀಡಿದ ಎನ್‌ಸಿಬಿ
Update: 2020-12-15 15:17 IST
ಮುಂಬೈ:ಮಾದಕವಸ್ತು ನಿಯಂತ್ರಣ ಘಟಕ(ಎನ್‌ಸಿಬಿ) ಬಾಲಿವುಡ್ ನಟ ಅರ್ಜುನ್ ರಾಂಪಾಲ್‌ಗೆ ಮತ್ತೊಮ್ಮೆ ಸಮನ್ಸ್ ನೀಡಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಬಾಲಿವುಡ್‌ನ ಡ್ರಗ್ಸ್ ನಂಟಿನ ಕುರಿತು ಎನ್‌ಸಿಬಿ ತನಿಖೆ ನಡೆಸುತ್ತಿದೆ.
ಪ್ರಕರಣದ ಕುರಿತು ಇನ್ನಷ್ಟು ವಿಚಾರಣೆಗೆ ಎನ್‌ಸಿಬಿ ಕಚೇರಿಗೆ ನಾಳೆ(ಡಿ.16)ಹಾಜರಾಗುವಂತೆ ಅರ್ಜುನ್ ರಾಂಪಾಲ್‌ಗೆ ಸಮನ್ಸ್ ನೀಡಲಾಗಿದೆ.
ನವೆಂಬರ್ 13 ರಂದು ಅರ್ಜುನ್ ಅವರನ್ನು ಎನ್‌ಸಿಬಿ ವಿಚಾರಣೆ ನಡೆಸಿತ್ತು. ಅರ್ಜುನ ಅವರ ಗೆಳತಿಯನ್ನು ಎರಡು ದಿನಗಳ ಕಾಲ ಎನ್‌ಸಿಬಿ ವಿಚಾರಣೆ ನಡೆಸಿತ್ತು. ನವೆಂಬರ್ 10ರಂದು ಅರ್ಜುನ್ ಮನೆ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಬಳಿಕ ಅರ್ಜುನ್ ಹಾಗೂ ಅವರ ಗೆಳತಿಗೆ ಸಮನ್ಸ್ ನೀಡಿತ್ತು. ನಟನ ಚಾಲಕನನ್ನು ಬಂಧಿಸಲಾಗಿದ್ದು, ಎನ್‌ಸಿಬಿ ಅಧಿಕಾರಿಗಳು ಆತನನ್ನು ಪ್ರಶ್ನಿಸಿದ್ದರು.