×
Ad

ನೈಜೀರಿಯ: ಅಪಹೃತ 17 ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

Update: 2020-12-16 22:50 IST
ಫೋಟೊ ಕೃಪೆ: twitter.com

ಅಬುಜ (ನೈಜೀರಿಯ), ಡಿ. 16: ನೈಜೀರಿಯದ ಶಾಲೆಯೊಂದರಿಂದ ಬೊಕೊ ಹರಾಮ್ ಭಯೋತ್ಪಾದಕ ಗುಂಪು ಅಪಹರಿಸಿರುವ ವಿದ್ಯಾರ್ಥಿಗಳ ಪೈಕಿ ಕನಿಷ್ಠ 17 ವಿದ್ಯಾರ್ಥಿಗಳನ್ನು ಮಂಗಳವಾರ ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ವಿದ್ಯಾರ್ಥಿಗಳನ್ನು ರಕ್ಷಿಸುವ ಕಾರ್ಯಾಚರಣೆಯ ವೇಳೆ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಯನ್ನು ಉಲ್ಲೇಖಿಸಿ ಅನಡೊಲು ಸುದ್ದಿ ಸಂಸ್ಥೆ ವರದಿ ಮಾಡಿದೆ.

 ಕಟ್ಸಿನ ರಾಜ್ಯದ ಸಣ್ಣ ಪಟ್ಟಣ ಕಂಕರದಲ್ಲಿರುವ ಶಾಲೆಯೊಂದರಿಂದ 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಶುಕ್ರವಾರ ರಾತ್ರಿ ಬಂದೂಕುಧಾರಿಗಳು ಅಪಹರಿಸಿದ್ದರು.

‘‘ಅಪಹೃತಗೊಂಡ ವಿದ್ಯಾರ್ಥಿಗಳ ಪೈಕಿ ಹೆಚ್ಚಿನವರು ನೆರೆಯ ರಾಜ್ಯದ ಅರಣ್ಯದಲ್ಲಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ’’ ಎಂದು ಕಟ್ಸಿನ ರಾಜ್ಯದ ಗವರ್ನರ್ ಅಮಿನು ಮಸರಿ ಸ್ಥಳೀಯ ಆಕಾಶವಾಣಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News