ಮುಂದಿನ ಸುತ್ತಿನ ಶಾಂತಿ ಮಾತುಕತೆ ದೇಶದಲ್ಲೇ ನಡೆಯಲಿ : ಅಫ್ಘಾನ್ ಅಧ್ಯಕ್ಷ

Update: 2020-12-16 18:44 GMT

ಕಾಬೂಲ್ (ಅಫ್ಘಾನಿಸ್ತಾನ), ಡಿ. 16: ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರಕಾರದ ನಡುವಿನ ಮುಂದಿನ ಸುತ್ತಿನ ಮಾತುಕತೆಯು ದೇಶದಲ್ಲೇ ನಡೆಯಬೇಕು ಎಂದು ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ. ಮಾತುಕತೆಗಳ ಸ್ಥಳವನ್ನು ಖತರ್‌ನಿಂದ ದೇಶಕ್ಕೆ ವರ್ಗಾಯಿಸಬೇಕು ಎಂಬ ಕರೆಗಳಿಗೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಯುದ್ಧನಿರತ ಬಣಗಳು ಖತರ್ ರಾಜಧಾನಿ ದೋಹಾದ ವಿಲಾಸಿ ಹೊಟೇಲೊಂದರಲ್ಲಿ ಸೆಪ್ಟಂಬರ್‌ನಿಂದ ನೇರ ಮಾತುಕತೆಯಲ್ಲಿ ತೊಡಗಿವೆ. ದೋಹಾದಲ್ಲಿ ತಾಲಿಬಾನ್ ರಾಜಕೀಯ ಕಚೇರಿಯೊಂದನ್ನು ಹೊಂದಿದೆ.

ಉಭಯ ಬಣಗಳ ಸಂಧಾನಕಾರರು ಶನಿವಾರ ಮಾತುಕತೆಗೆ ಜನವರಿ 5ರವರೆಗೆ ವಿರಾಮ ನೀಡಿದ್ದಾರೆ.

‘‘ಎರಡನೇ ಸುತ್ತಿನ ಮಾತುಕತೆಗಳು ಅಫ್ಘಾನಿಸ್ತಾನದ ಒಳಗೆ ನಡೆಯಬೇಕೆಂದು ನಾವು ಬಯಸುತ್ತೇವೆ’’ ಎಂದು ಸಚಿವ ಸಂಪುಟ ಸಭೆಯಲ್ಲಿ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ ಎಂಬುದಾಗಿ ಅವರ ವಕ್ತಾರ ಸಿದ್ದೀಕ್ ಸಿದ್ದೀಕಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News