ಗುತ್ತಿಗೆ ಸಂಸ್ಥೆಯ ಮೇಲೆ ಐಟಿ ದಾಳಿ; 700 ಕೋ.ರೂ. ಕಪ್ಪುಹಣ ಪತ್ತೆ

Update: 2020-12-17 16:11 GMT

ಚೆನ್ನೈ, ಡಿ.17: ಸರಕಾರದ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸುವ ತಮಿಳುನಾಡಿನ ಗುತ್ತಿಗೆ ಸಂಸ್ಥೆಯೊಂದರ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯು ಸುಮಾರು 700 ಕೋ.ರೂ.ಕಪ್ಪುಹಣವನ್ನು ಪತ್ತೆ ಹಚ್ಚಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯು ಗುರುವಾರ ತಿಳಿಸಿದೆ. ಇಲಾಖೆಯು ದಾಳಿ ಸಂದರ್ಭ 21 ಕೋ.ರೂ.ಗಳಷ್ಟು ಲೆಕ್ಕಪತ್ರವಿಲ್ಲದ ನಗದು ಹಣವನ್ನೂ ವಶಪಡಿಸಿಕೊಂಡಿದೆ.

ಡಿ.14 ಮತ್ತು 15ರಂದು ಸಂಸ್ಥೆಯ ಚೆನ್ನೈ ಮತ್ತು ಈರೋಡ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ಸರಕಾರಿ ಕಾಮಗಾರಿಗಳ ಪ್ರಮುಖ ಸಿವಿಲ್ ಕಂಟ್ರಾಕ್ಟರ್ ಆಗಿರುವ ಸಂಸ್ಥೆಯು ಸಮುದ್ರ ತೀರಗಳಲ್ಲಿ ಅಲೆ ತಡೆಗೋಡೆಗಳನ್ನು ಅಳವಡಿಸುವುದರಲ್ಲಿ ವಿಶೇಷ ನೈಪುಣ್ಯ ಹೊಂದಿದ್ದು,ಬಸ್ ಸಾರಿಗೆ,ಮದುವೆ ಹಾಲ್‌ಗಳ ಒಡೆತನ ಮತ್ತು ಆಹಾರ ಮಸಾಲಾ ಉದ್ಯಮಗಳನ್ನೂ ಹೊಂದಿದೆ.

ಕಾಮಗಾರಿಗಳ ವೆಚ್ಚದಲ್ಲಿ ಹೆಚ್ಚಿನ ದರಗಳಲ್ಲಿ ಖರೀದಿ ಬಿಲ್‌ಗಳನ್ನು ಪಡೆದುಕೊಳ್ಳುತ್ತಿದ್ದ ಸಂಸ್ಥೆಯು ಬಳಿಕ ಪೂರೈಕೆದಾರರಿಂದ ಮತ್ತು ಉಪ ಗುತ್ತಿಗೆದಾರರಿಂದ ಹೆಚ್ಚುವರಿ ಹಣವನ್ನು ಮರಳಿ ಪಡೆದುಕೊಳ್ಳುತ್ತಿತ್ತು. ಈ ಅಕ್ರಮದಿಂದ ಅದು ಸುಮಾರು 700 ಕೋ.ರೂ.ಗಳಷ್ಟು ಕಪ್ಪುಹಣವನ್ನು ಸಂಗ್ರಹಿಸಿದ್ದು,ಅದನ್ನು ರಿಯಲ್ ಎಸ್ಟೇಟ್ ಮತ್ತು ಉದ್ಯಮ ವಿಸ್ತರಣೆಯಲ್ಲಿ ಮರುಹೂಡಿಕೆ ಮಾಡಿದೆ ಎಂದು ತಿಳಿಸಿರುವ ಸಿಬಿಡಿಟಿ,ಈ ಪೈಕಿ 150 ಕೋ.ರೂ.ಗಳ ಅಘೋಷಿತ ಆದಾಯವನ್ನು ಸಂಸ್ಥೆಯು ಒಪ್ಪಿಕೊಂಡಿದೆ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News