ರಶ್ಯ ವಿಷಪ್ರಾಶನ ಮಾಡಿದ್ದರೆ ನವಾಲ್ನಿ ಬದುಕಿರುತ್ತಿರಲಿಲ್ಲ: ವ್ಲಾದಿಮಿರ್ ಪುಟಿನ್

Update: 2020-12-17 16:55 GMT

ಮಾಸ್ಕೋ (ರಶ್ಯ), ಡಿ. 17: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಯ ವಿಷಪ್ರಾಶನದ ಹಿಂದೆ ದೇಶದ ಭದ್ರತಾ ಸಂಸ್ಥೆಗಳಿವೆ ಎಂಬ ವರದಿಗಳನ್ನು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗುರುವಾರ ತಿರಸ್ಕರಿಸಿದ್ದಾರೆ. ಒಂದು ವೇಳೆ, ಹಾಗೆ ಆಗಿದ್ದರೆ ನವಾಲ್ನಿ ಈಗ ಬದುಕಿರುತ್ತಿರಲಿಲ್ಲ ಎಂದಿದ್ದಾರೆ.

ಪುಟಿನ್‌ರ ತೀವ್ರ ಟೀಕಾಕಾರರಾಗಿರುವ ನವಾಲ್ನಿಗೆ ಸೋವಿಯತ್ ಕಾಲದ ನೊವಿಚೊಕ್ ನರ್ವ್ ಏಜಂಟ್ ಎಂಬ ರಾಸಾಯನಿಕವನ್ನು ಪ್ರಾಶನ ಮಾಡಲಾಗಿದೆ ಎಂದು ಹಲವು ಪಾಶ್ಚಿಮಾತ್ಯ ದೇಶಗಳ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇದನ್ನು ರಶ್ಯ ಪದೇ ಪದೇ ನಿರಾಕರಿಸುತ್ತಾ ಬಂದಿದೆ.

ರಶ್ಯದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಹಲವು ವರ್ಷಗಳಿಂದ ನವಾಲ್ನಿಯ ಹಿಂದೆ ಬಿದ್ದಿತ್ತು ಎಂಬುದಾಗಿ ಈ ವಾರ ಜಂಟಿ ಮಾಧ್ಯಮ ವರದಿಯೊಂದು ಹೇಳಿತ್ತು ಹಾಗೂ ಸರ್ವಿಸ್‌ನ ರಾಸಾಯನಿಕ ಅಸ್ತ್ರಗಳ ಪರಿಣತರ ಹೆಸರುಗಳು ಮತ್ತು ಚಿತ್ರಗಳನ್ನು ಪ್ರಕಟಿಸಿ, ನವಾಲ್ನಿ ವಿಷಪ್ರಾಶನದ ಹಿಂದೆ ಅವರಿದ್ದಾರೆ ಎಂದು ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News