×
Ad

ಪಿಎಂ ಕೇರ್ಸ್‌ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ಟೀಕೆ

Update: 2020-12-17 23:33 IST

ಹೊಸದಿಲ್ಲಿ, ಡಿ. 17: ಭಾರತದಲ್ಲಿ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ರೂಪಿಸಲಾದ ಪಿಎಂ ಕೇರ್ಸ್‌ ನಿಧಿಯ ಪಾರದರ್ಶಕತೆ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

 ‘‘ಪಿಎಂ ಕೇರ್ಸ್‌-ಪಾರದರ್ಶಕತೆಗೆ ಸ್ವಾಗತ’’ ಎಂದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಪಿಎಂ ಕೇರ್ಸ್‌ ಖಾಸಗಿಯೇ ಅಥವಾ ಸರಕಾರಿ ನಿಧಿಯೇ ಎಂಬುದು ಸ್ಪಷ್ಟವಾಗಿಲ್ಲ ಎಂಬ ಸುದ್ದಿ ಶೀರ್ಷಿಕೆಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಬುಧವಾರ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲ ಸರಣಿ ಟ್ವೀಟ್‌ಗಳ ಮೂಲಕ ಪಿಎಂ ಕೇರ್ಸ್‌ ನಿಧಿಯನ್ನು ಭಾರತೀಯ ರಾಯಭಾರಿ ಕಚೇರಿ ಯಾಕೆ ಪ್ರಚಾರ ಮಾಡಿತು ?, ಯಾಕೆ ದೇಣಿಗೆ ಸ್ವೀಕರಿಸಿತು ? ಹಾಗೂ ಈ ನಿಧಿಯ ಜಾಹೀರಾತನ್ನು ಚೀನಾದ ನಿಷೇಧಿತ ಆ್ಯಪ್‌ನಲ್ಲಿ ಯಾಕೆ ಪ್ರಕಟಿಸಲಾಯಿತು ? ಎಂದು ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News