ಯೋಧರಿಗೆ ಅವಶ್ಯಕ ವಸ್ತುಗಳನ್ನು ಪೂರೈಸುತ್ತಿರುವ ರೈಲು ಸಂಚಾರವನ್ನು ತಡೆಯುತ್ತಿರುವವರು ರೈತರಲ್ಲ: ತೋಮರ್

Update: 2020-12-18 18:16 GMT

ಪಾಲಕ್ಕಾಡ್, ಡಿ. 18: ಪ್ರತಿಪಕ್ಷಗಳು ಹಾಗೂ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ಇತರರು ಅಮಾಯಕ ರೈತರನ್ನು ತಮ್ಮ ರಾಜಕೀಯಕ್ಕೆ ಕೈಗೊಂಬೆಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಶುಕ್ರವಾರ ಹೇಳಿದ್ದಾರೆ.

ಲೇಹ್-ಲಡಾಕ್‌ನಲ್ಲಿ ಸವಾಲಿನ ಪರಿಸ್ಥಿತಿ ಇರುವಾಗ ಗಡಿಯಲ್ಲಿರುವ ಯೋಧರಿಗೆ ಅವಶ್ಯಕ ಸಾಮಗ್ರಿಗಳನ್ನು ಸಾಗಿಸುವ ರೈಲುಗಳನ್ನು ತಡೆಹಿಡಿಯುವವರು ರೈತರಾಗಲು ಸಾಧ್ಯವಿಲ್ಲ ಎಂದು ತೋಮರ್ ಅವರು ಪ್ರತಿಭಟನಾ ನಿರತ ರೈತರಿಗೆ ಬರೆದ 8 ಪುಟಗಳ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ. ‘‘ಈ ಜನರ ಕಾರಣಕ್ಕಾಗಿ ನಾವು ನಮ್ಮ ಯೋಧರಿಗೆ ಬೇಕಾದ ಅವಶ್ಯಕ ವಸ್ತುಗಳನ್ನು ವಿಮಾನ ಹಾಗೂ ಇತರ ಮಾರ್ಗಗಳ ಮೂಲಕ ಸಾಗಿಸಬೇಕಾಗಿದೆ’’ ಎಂದು ಅವರು ತಿಳಿಸಿದ್ದಾರೆ.

1962ರ ಚೀನಾ-ಭಾರತ ಯುದ್ಧವನ್ನು ಉಲ್ಲೇಖಿಸಿದ ತೋಮರ್, ‘‘ಪರದೆಯ ಹಿಂದೆ ಅಡಗಿಕೊಂಡು ರೈತರನ್ನು ದಾರಿ ತಪ್ಪಿಸುತ್ತಿರುವ ಈ ಜನರ ಸಿದ್ಧಾಂತ 1962ರ ಯುದ್ಧದ ಸಂದರ್ಭ ದೇಶದೊಂದಿಗೆ ಇರಲಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News