ಪ್ರಜೆಗಳಲ್ಲಿ ಬಿತ್ತುವ ಆತಂಕವೇ ಜನಾಂಗೀಯವಾದಿ ನಾಯಕರ ಬಂಡವಾಳ

Update: 2020-12-19 19:30 GMT

ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುವ ಹೋಮಿ ಕೆ. ಬಾಬಾ ಮುಂಬೈ ನಗರದಲ್ಲಿ ಜನಿಸಿದವರು. ವಸಾಹತೋತ್ತರ ಅಧ್ಯಯನಕ್ಕೆ ಮುಖ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ‘ದ ವೈರ್’ ಅಂತರ್ಜಾಲ ಪತ್ರಿಕೆಯ ಸ್ಥಾಪಕರಲ್ಲಿ ಒಬ್ಬರಾದ ಸಿದ್ಧಾರ್ಥ ಭಾಟಿಯ ಅವರು ಹೋಮಿ ಕೆ. ಬಾಬಾ ಅವರೊಂದಿಗೆ ನಡೆಸಿದ ಸಂದರ್ಶನದ ಕನ್ನಡ ಅನುವಾದವಿದು. ಡಿಸೆಂಬರ್ 12, 2020ರಂದು ಪ್ರಕಟವಾದ ಮೂಲ ಸಂದರ್ಶನವನ್ನು https://m.thewire.in/article/politics/watch-homi-k-bhabha-interview-populism ಲಿಂಕ್‌ನಲ್ಲಿ ನೋಡಬಹುದು.


ಭಾಗ-1

ಸಿದ್ಧಾರ್ಥ ಭಾಟಿಯ: ಒಂದು ವರ್ಷದ ಹಿಂದಿನವರೆಗೆ ಪರಿಸ್ಥಿತಿ ಬೇರೆಯೇ ಇತ್ತು. ನಾವು ಯಾರನ್ನಾದರು ಸಂದರ್ಶಿಸಬೇಕೆಂದರೆ ಅವರು ಇರುವ ಊರಿಗೆ ಹೋಗಬೇಕಿತ್ತು; ಹೊರದೇಶದಲ್ಲಿ ಅವರು ಇದ್ದರಂತೂ ಸಂದರ್ಶನ ಕಷ್ಟಸಾಧ್ಯವಾಗುತ್ತಿತ್ತು. ಆದರೆ ಈಗ ನೋಡಿ?ನಾವು ಸಾಗರಗಳಾಚೆ ಕುಳಿತು ವೀಡಿಯೊದ ಮೂಲಕ ಸಂವಾದಿಸುತ್ತಿದ್ದೇವೆ! ಮನುಷ್ಯರು ಬಹಳ ಬೇಗ ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ, ಅಲ್ಲವೇ

ಹೋಮಿ ಬಾಬಾ: ಹೌದು. ಇದೊಂದು ಹೊಸ ಸಂಸ್ಕೃತಿ. ಜೂಮ್ ಸಂವಾದಗಳು ಮತ್ತು ಸಮ್ಮೇಳನಗಳು ನಮಗೆಲ್ಲಾ ಹೊಸತೇ ಆಗಿರುತ್ತವೆ. ಈಗಂತೂ ಜೂಮ್ ಸಂದರ್ಶನಕ್ಕೆಂದು ಮೀಸಲಾದ ಉಡುಗೆಯೂ ರೂಢಿಗೆ ಬಂದಿದೆ! ಬಹಳ ಆಸಕ್ತಿಕರ ರೀತಿಯಲ್ಲಿ ಈ ಹೊಸ ವಿಧಾನಕ್ಕೆ ನಾವು ಹೊಂದಿಕೊಳ್ಳುತ್ತಿದ್ದೇವೆ ಎನಿಸುತ್ತಿದೆ. ಜೂಮ್ ಸಮ್ಮೇಳನದಲ್ಲಿ ಕೀ ನೋಟ್ ಭಾಷಣ ಇಪ್ಪತ್ತು ನಿಮಿಷದ ಒಳಗಿರಬೇಕೆಂದು ನಾನೀಗ ತಿಳಿದುಕೊಂಡಿದ್ದೇನೆ. ಸಾಮಾನ್ಯ ಪರಿಸ್ಥಿತಿಯಲ್ಲಿ, ಇಂತಹ ಕೀ ನೋಟ್ ಭಾಷಣಗಳನ್ನು ಕನಿಷ್ಠವೆಂದರೂ ಐವತ್ತು ನಿಮಿಷ ಮಾಡುವುದು ನನ್ನ ರೂಢಿಯಾಗಿತ್ತು. ಜೂಮ್ ಮಾಧ್ಯಮದಲ್ಲಿ ನಡೆಯುವ ಸಂವಾದಗಳನ್ನು ಜನರು ಹೆಚ್ಚಿನ ಗಮನವಿಟ್ಟು ಕೇಳಬೇಕಾದ ಅಗತ್ಯವಿರುತ್ತದೆ. ನಾವೀಗ ಸಂವಾದಿಸುವ ಮತ್ತು ಸಂವಹಿಸುವ ಮಾಧ್ಯಮ ಬದಲಾಗಿದ್ದರೂ, ಪರಸ್ಪರ ಭೇಟಿಯಾಗುವ, ಆಲಂಗಿಸುವ ಮತ್ತು ಸಮ್ಮೇಳನದ ನಂತರ ಒಂದು ಪಾನಗೋಷ್ಠಿಯಲ್ಲಿ ಜೊತೆಯಾಗುವ ಆನಂದವನ್ನು ಖಂಡಿತವಾಗಿಯೂ ನಾವೆಲ್ಲರೂ ಕಳೆದುಕೊಂಡಿದ್ದೇವೆ. ಮಾಸ್ಕ್ ಇಲ್ಲದೆ, ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರದ ಸ್ಥಿತಿಯಲ್ಲಿ ನೇರವಾಗಿ ಸಭಿಕರೊಂದಿಗೆ ಸಂವಾದಿಸುವ ಪರಿಸ್ಥಿತಿ ಬೇರೆಯೇ ಆಗಿರುತ್ತದೆ. ಆನ್‌ಲೈನ್‌ಸಂವಾದದಲ್ಲಿ ಸೃಷ್ಟಿಯಾಗುವ ಇನ್ಬಾಕ್ಸ್ ಪ್ರಶ್ನೆಗಳನ್ನು ನಾವು ಗಮನಿಸಲು ಆಗದ ಸ್ಥಿತಿಯೇ ಹೆಚ್ಚಿರುತ್ತದೆ. ಆದರೆ ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಂಡು ಹೋಗುವ ಯತ್ನವಂತೂ ಮಾಡುತ್ತಿದ್ದೇವೆ. ಜೀವಂತವಿರಲೂ ಒಂದಿಷ್ಟು ಸೃಜನಶೀಲ ದಾರಿಗಳ ಅನ್ವೇಷಣೆಯಂತೂ ಆಗುತ್ತಿದೆ.


ಸಿದ್ಧಾರ್ಥ ಭಾಟಿಯ: ಹೀಗೆ ಹೊಂದಿಕೊಳ್ಳುವ ಮತ್ತು ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವನ್ನು ಕುರಿತು ಚರ್ಚಿಸುವುದಾದರೆ, ವಿಶ್ವದ ಅನೇಕ ಕಡೆ ಪ್ರಜಾಪ್ರಭುತ್ವದ ಹೊಸದೊಂದು ರೂಪಕ್ಕೆ ಹೊಂದಿಕೊಳ್ಳುವ ಅನಿವಾರ್ಯತೆಯನ್ನು ಜನರು ಎದುರಿಸುತ್ತಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವದ ಎಲ್ಲಾ ವಿಧಾನಗಳು ಮತ್ತು ಸಂಸ್ಥೆಗಳು ಜಾರಿಯಲ್ಲಿರುತ್ತವೆ, ಆದರೆ ಇದರ ಮೂಲಕ ಆರಿಸಿ ಬರುವ ನಾಯಕರು ಮಾತ್ರ ಅತಿಯಾದ ಜನಪ್ರಿಯತೆಯನ್ನು ಮತ್ತು ಸರ್ವಾಧಿಕಾರಿ ಧೋರಣೆಯನ್ನು ಹೊಂದಿರುತ್ತಾರೆ. ಇದನ್ನು ಏನೆಂದು ಕರೆಯುವುದು: ಹೈಬ್ರಿಡ್ ಪ್ರಜಾಪ್ರಭುತ್ವ ಅನ್ನುವುದೇ? ಅಥವಾ ತಿರುಚಿದ ಪ್ರಜಾಪ್ರಭುತ್ವ ಎನ್ನುವುದೇ? ನನಗೆ ತಿಳಿಯುತ್ತಿಲ್ಲ. ಹೀಗೆ ಅರೆ-ಸರ್ವಾಧಿಕಾರಿಗಳು ಪ್ರಜಾಪ್ರಭುತ್ವದ ಹೆಸರಿನಲ್ಲಿ ಆಡಳಿತ ನಡೆಸುವ ಈ ವ್ಯವಸ್ಥೆಯನ್ನು ಹೇಗೆ ಅರಿಯುವುದು? ನೀವಂತೂ ಈ ಕ್ಷೇತ್ರದಲ್ಲಿ ಸಾಕಷ್ಟು ಅಧ್ಯಯನ ನಡೆಸಿರುತ್ತೀರಿ. ಆದುದರಿಂದ ಈ ಕುರಿತು ನಿಮ್ಮ ಆಲೋಚನೆಗಳು ಏನು?

ಹೋಮಿ ಬಾಬಾ: ನೀವು ಹೇಳುವುದು ನೂರಕ್ಕೆ ನೂರು ಸತ್ಯವಾಗಿದೆ. ನೋಡಿ?ಯಾವುದೇ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಒಂದಿಷ್ಟು ವಿಶ್ವಾಸ ಮತ್ತು ಒಳ್ಳೆಯತನದಲ್ಲಿ ನಂಬಿಕೆ ಅಗತ್ಯವಾಗಿ ಬೇಕಿರುತ್ತದೆ; ಈ ಎರಡೂ ಗುಣಗಳು ಶಿಥಿಲಗೊಂಡಿರುವುದರ ಸೂಚನೆಯೇ ಇಂತಹ ಪರಿಸ್ಥಿತಿಯ ನಿರ್ಮಾಣ ಎಂದೇ ನನ್ನ ಗ್ರಹಿಕೆಯಾಗಿರುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಬಹಳ ಅಗತ್ಯವಾದ ‘‘ಎಲ್ಲರ ಒಳಿತಿಗಾಗಿ ಮತ್ತು ಎಲ್ಲರ ಅನುಕೂಲಕ್ಕಾಗಿ ವ್ಯವಸ್ಥೆ ಇರಬೇಕು ಎನ್ನುವ ಆಲೋಚನೆ’’ ಈಗೀಗ ಇಲ್ಲವಾಗುತ್ತಿರುವುದನ್ನು ಅನೇಕ ತಜ್ಞರು ಗುರುತಿಸಿದ್ದಾರೆ. ಈಗಿನ ಸ್ಥಿತಿ ಹೇಗಿದೆ ಅಂದರೆ ಉಭಯ ಪಕ್ಷಗಳೂ ರಾಜಕೀಯ ಆಟವನ್ನು ಆಡಲು ಇಚ್ಛಿಸುತ್ತವೆ, ಆದರೆ ಆಟದ ನಿಯಮಗಳನ್ನು ಅನುಸರಿಸುವ ಇರಾದೆ ಮಾತ್ರ ಇಬ್ಬರಿಗೂ ಇರುವುದಿಲ್ಲ; ಇತ್ತಂಡಗಳು ತಮಗೆ ಅನುಕೂಲವಾಗುವುದನ್ನು ಮಾತ್ರ ಆರಿಸಿಕೊಳ್ಳುವ ಉತ್ಸಾಹ ತೋರುತ್ತವೆ. ಇದೊಂದು ಅಪಾಯಕಾರಿ ಸ್ಥಿತಿ; ಗಾಬರಿ ಮೂಡಿಸುವ ಪರಿಸ್ಥಿತಿ ಎಂದೇ ಹೇಳಬೇಕು. ಪ್ರಜಾಪ್ರಭುತ್ವದಲ್ಲಿ ಒಳಿತು ಎನ್ನುವುದು ಇರುತ್ತದೆ ಮತ್ತು ಅದನ್ನು ಸಂಶೋಧಿಸಬೇಕು ಎನ್ನುವ ನಿಲುವಿಗೆ ಬಂದಿರುವುದೇ ಸಮಸ್ಯೆಯ ಮೂಲ ಎಂದು ನನಗೆ ಅನ್ನಿಸುತ್ತಿದೆ. ಆದರೆ ಪ್ರಜಾಪ್ರಭುತ್ವದಲ್ಲಿ ಇರುವ ‘‘ಸ್ವತಂತ್ರ ಅಭಿವ್ಯಕ್ತಿಯ’’ ಕುರುಹು ಇದು; ಇದುವೇ ಭಿನ್ನಮತವನ್ನು ಹೊಂದುವ ಮತ್ತು ವ್ಯಕ್ತಗೊಳಿಸುವ ಸಂಸ್ಕೃತಿಯ ಇರುವಿಕೆಯ ಸೂಚನೆಯೂ ಆಗಿರುತ್ತದೆ. ಭಿನ್ನಮತವನ್ನು ಎಂದಿಗೂ ಚರ್ಚೆ ಮಾಡಬೇಕೇ ಹೊರತು ನಿರಾಕರಿಸಬಾರದು ಮಾಡಬಾರದು. ಇಂದು ನೆಗೋಶಿಯೇಷನ್‌ಗಿಂತ ನೆಗೇಷನ್ ಹೆಚ್ಚಿನ ಪ್ರಮಾಣದಲ್ಲಿದೆ. ಎಲ್ಲರಿಗೂ ಒಳಿತಾಗುವುದು ಸದಾ ಕಾಲ ಇರುವಂತಹ ಸ್ಥಿತಿಯೇ ಆಗಿರುತ್ತದೆ; ಅದನ್ನು ಹುಡುಕಾಡಿ ಗುರುತಿಸುವ ಅಗತ್ಯ ಇರುವುದಿಲ್ಲ. ಏಕೆಂದರೆ ಸಾರ್ವತ್ರಿಕ ಮೌಲ್ಯಗಳು ಸಾರ್ವತ್ರೀಕೃತಗೊಳ್ಳುವಂತಹವು. ಎಲ್ಲರೂ ಅವರವರ ಒಳಿತಿಗೇ ಕಾರ್ಯನಿರ್ವಹಿಸುವುದು. ಇದರಲ್ಲಿ ಯಾವುದೇ ಸಂಶಯವಿಲ್ಲ. ಕೆಲವು ಬಾರಿ ಇಂತಹ ಸ್ವಾರ್ಥಪರ ಚಿಂತನೆಗಳು ಸರ್ವರ ಒಳಿತಿನ ಪರವಾಗಿರುತ್ತವೆ; ಕೆಲವು ಬಾರಿ ಎಲ್ಲರ ಒಳಿತಿನ ಪರವಾಗಿ ಇರದಿರುವ ಸಾಧ್ಯತೆಯೂ ಇರುತ್ತದೆ. ಆದರೆ ಎಲ್ಲರ ಒಳಿತಿನ ಗುರಿಯನ್ನು ಮತ್ತು ಮುಕ್ತ ಚರ್ಚೆಯ ಉದ್ದೇಶವನ್ನು ಹೊಸದಾಗಿ ಸಂಶೋಧಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವುದು ಇದೆಯಲ್ಲಾ ಅದು ಮಾತ್ರ ಅಪಾಯಕಾರಿ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವದ ಭಾಗವಾಗಿ ಸಂಭವಿಸುವ ಅನೇಕ ವಿದ್ಯಾಮಾನಗಳು ನಿಂತು ಹೋಗುತ್ತವೆ. ನಿಗದಿತವಾಗಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಚಕ್ರಗಳಿದ್ದ ಹಾಗೆ. ಆದರೆ ಇಂದು ಪ್ರಜಾಪ್ರಭುತ್ವದ ಇಂಜಿನ್ ಅನ್ನು ಚಲಾಯಿಸುತ್ತಿರುವವರು ಜನಪ್ರಿಯರಾಗಿರುವ ಜನಾಂಗೀಯ-ರಾಷ್ಟ್ರೀಯವಾದಿ ಜನಪ್ರಿಯ ನಾಯಕರಾಗಿದ್ದಾರೆ. ಇದು ಏನನ್ನು ತೋರಿಸುತ್ತದೆ? ಪ್ರಜಾಪ್ರಭುತ್ವದ ಸೋಲು ಕೇವಲ ರಾಜಕೀಯ ಹಂತದಲ್ಲಿ ಮಾತ್ರ ಇರುವುದಿಲ್ಲ; ಅದು ನೈತಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಂತಗಳಲ್ಲೂ ಸಹಾ ಸಂಭವಿಸಿದೆ ಎನ್ನುವುದನ್ನು ತೋರಿಸುತ್ತದೆ. ಇಂದಿನ ಶಿಕ್ಷಣವು ವಿವಿಧ ರೀತಿಯ ಪರಿಣತ ಜ್ಞಾನವಾಗಿ ಅತಿಯಾಗಿ ಹಂಚಿಹೋಗಿದೆ. ಇದರ ಪರಿಣಾಮವಾಗಿ ಶಿಕ್ಷಣವು ಇಂದು ತಾಂತ್ರಿಕ ಆಡಳಿತಗಾರರ ಮತ್ತು ವಾಣಿಜ್ಯೀಕರಣದ ಹಿಡಿತಕ್ಕೆ ಸಿಲುಕಿದೆ. ಓರ್ವ ಸಾಮಾನ್ಯ ವಿದ್ಯಾರ್ಥಿಗೆ ನಾಗರಿಕ ಬದುಕನ್ನು ಕಲಿಸುವ ಕಲ್ಪನಾತ್ಮಕವಾದ ಮತ್ತು ನಾಗರಿಕ ಸಮಸ್ಯೆಗಳ ನಿವಾರಣೆಗೆ ಮಧ್ಯಪ್ರವೇಶಿಸುವ ಉದ್ದೇಶವುಳ್ಳ ಶಿಕ್ಷಣವಂತೂ ಈಗ ಅಸ್ತಿತ್ವದಲ್ಲೇ ಇಲ್ಲ. ನೀವೀಗ ಓರ್ವ ಯಶಸ್ವಿ ಇಂಜಿನಿಯರ್ ಆಗಬೇಕೆನ್ನುತ್ತೀರಿ. ಓರ್ವ ರಾಜಕೀಯ ಶಕ್ತಿಯುಳ್ಳ ವ್ಯಕ್ತಿಯಾಗಬೇಕೆಂದು ಮತ್ತು ಉತ್ತಮ ವ್ಯಾಪಾರಿಯಾಗಬೇಕೆಂದು ಬಯಸುತ್ತೀರೇ ಹೊರತು ಇವರೆಲ್ಲರ ನಡುವಿನ ಕೊಂಡಿಯಾಗುವುದು ಎಂದು ಅರಿಯುವ ಯಾವುದೇ ಉದ್ದೇಶ ಇರುವುದಿಲ್ಲ. ನನಗೆ ಅತ್ಯಂತ ಭಯ ತರಿಸುವ ಅಂಶವೊಂದಿದೆ. ಇದು ಸಂಭವಿಸಿದ್ದು 1971ರಲ್ಲಿ. ಫ್ರೆಂಚ್ ತತ್ವಜ್ಞಾನಿ ಮಿಶೆಲ್ ಫುಕೋ ಅವರನ್ನು ಜಾಗತೀಕರಣದ ಕುರಿತು ನಿಮ್ಮ ಆಲೋಚನೆ ಏನೆಂದು ಪ್ರಶ್ನಿಸಲಾಯಿತು. ಮುಂದಿನ ದಿನಗಳಲ್ಲಿ ಆರ್ಥಿಕ ಜಾಗತೀಕರಣ ಸಂಭಿಸುತ್ತದೆಯೇ? ಉತ್ತರ ಹೌದು ಎಂದಾಗಿತ್ತು. ಹಾಗೆ ಹಣಕಾಸು ಜಾಗತೀಕರಣ ಮೂಡುತ್ತದೆಯೇ? ಉತ್ತರ ಹೌದು ಎಂದಾಗಿತ್ತು. ಮುಂದಿನ ದಿನಗಳಲ್ಲಿ ಜಾಗತಿಕವಾದ ರಾಜಕೀಯ ಪ್ರಜ್ಞೆ ಮೂಡಲು ಅವಕಾಶವಿದೆಯೇ? ಇದಕ್ಕೆ ಉತ್ತರ ಇಲ್ಲ, ಸಾಧ್ಯವೇ ಇಲ್ಲ ಎನ್ನುವುದಾಗಿತ್ತು! ಇದು ನಮ್ಮನ್ನು ಗಾಬರಿಗೆ ದೂಡಿದೆ. ಇವತ್ತು ಅಮೆರಿಕ, ಹಂಗರಿ, ಬ್ರೆಝಿಲ್, ಭಾರತ, ಪಾಕಿಸ್ತಾನ, ಟರ್ಕಿ, ಪೋಲ್ಯಾಂಡ್ ಮುಂತಾದ ದೇಶಗಳಲ್ಲಿ ಜನಾಂಗೀಯ ರಾಷ್ಟ್ರೀಯವಾದವನ್ನು ಪ್ರತಿಪಾದಿಸುವ ಸರಕಾರಗಳಿವೆ. ಹಾಗೇ ರಶ್ಯ ಮತ್ತು ಚೀನಾ ದೇಶಗಳೂ ಇದೇ ಪಟ್ಟಿಯಲ್ಲಿವೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಈ ಎಲ್ಲಾ ದೇಶಗಳಲ್ಲಿರುವ ಸರಕಾರಗಳು ಪರಸ್ಪರ ಕೈಜೋಡಿಸಿರುತ್ತವೆ, ಒಂದಕ್ಕೊಂದು ಬೆಂಬಲ ವಿಸ್ತರಿಸಿಕೊಳ್ಳುತ್ತವೆ. ಈ ಬೆಂಬಲಗಳು ಕೇವಲ ತಾತ್ವಿಕ ಹಂತದಲ್ಲೇ ಅಷ್ಟೇ ಅಲ್ಲದೆ, ಸಾಂಸ್ಥಿಕ ಹಂತದಲ್ಲೂ ಇರುತ್ತವೆ. ಅನೇಕ ವರ್ಷಗಳ ಹಿಂದೆ ಫುಕೋ ಹೇಳಿದಂತಹ ಮಾತುಗಳು ಇಂದು ರಿಂಗಣಿಸುತ್ತಿವೆ: ಬಹುತೇಕ ದೇಶಗಳಲ್ಲಿ ಜನಾಂಗೀಯ ರಾಷ್ಟ್ರೀಯವಾದಿ ಸರಕಾರಗಳು ಅಧಿಕಾರದಲ್ಲಿವೆ. ಒಂದು ಜಾಗತಿಕ ರಾಜಕೀಯ ಪ್ರಜ್ಞೆಯಂತೂ ರೂಪುಗೊಂಡಿದೆ. ಆದರೆ ಅದು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬೆಂಬಲಿಸುವ ಹಾದಿಯಲ್ಲಂತೂ ಖಂಡಿತ ಇರುವುದಿಲ್ಲ.


ಸಿದ್ಧಾರ್ಥ ಭಾಟಿಯ: ನಿಮ್ಮ ಮಾತುಗಳು ಮತ್ತೊಂದು ಗಮನಾರ್ಹವಾದ ಅಂಶದೆಡೆ ಕೈ ತೋರಿಸುತ್ತವೆ. ಈ ಎಲ್ಲಾ ಜನಾಂಗೀಯ ರಾಷ್ಟ್ರೀಯವಾದಿ ನಾಯಕರು ತಮ್ಮ ತಮ್ಮ ದೇಶದಲ್ಲಿ ಭಾರೀ ಜನಪ್ರಿಯತೆಯನ್ನು ಹೊಂದಿರುತ್ತಾರೆ (ಚೀನಾದ ಕುರಿತು ಸ್ಪಷ್ಟವಾದ ಮಾಹಿತಿ ಲಭ್ಯವಿರುವುದಿಲ್ಲ). ಭಾರತದಲ್ಲಿ ಮೋದಿ, ಅಮೆರಿಕದಲ್ಲಿ ಟ್ರಂಪ್. ಟ್ರಂಪ್ ಅಂತೂ ದಾಖಲೆಯ ಪ್ರಮಾಣದಲ್ಲಿ ಈ ಬಾರಿ ಮತವನ್ನು ಪಡೆದಿರುತ್ತಾರೆ. ಇದರ ಅರ್ಥ ಹೊಸ ರೀತಿಯ ನಾಯಕರ ಉಗಮವಾಗಿದೆ ಮತ್ತು ಅವರು ಜನರ ಬೆಂಬಲವನ್ನು ಸಂಪಾದಿಸಿಕೊಂಡಿದ್ದಾರೆ ಎಂದು ನಿಮಗೆ ಅನ್ನಿಸುವುದಿಲ್ಲವೇ?

ಹೋಮಿ ಬಾಬಾ: ಖಂಡಿತವಾಗಿಯೂ ನೀವು ಹೇಳುವುದು ಸರಿಯಿದೆ. ಜನರ ಬೆಂಬಲ ಇವರಿಗೆ ಇರದೇ ಹೋಗಿದ್ದರೆ, ಇವರು ಅಧಿಕಾರದಲ್ಲಿರುವ ಅವಕಾಶವಾಗುತ್ತಲೇ ಇರಲಿಲ್ಲ ಮತ್ತು ನಾವು ಹೀಗೆ ವೀಡಿಯೊ ಸಂವಾದದ ಮೂಲಕ ಪ್ರಜಾಪ್ರಭುತ್ವದ ದೌರ್ಬಲ್ಯವನ್ನು (ಫ್ರಾಜಿಲಿಟಿ) ಕುರಿತು ಚರ್ಚಿಸುವ ಅಗತ್ಯವೇ ಬರುತ್ತಿರಲಿಲ್ಲ. ಈ ನಾಯಕರು ತಮ್ಮ ಪರವಾಗಿ ಜನರನ್ನು ಗಳಿಸಿರುವ ಕಾರಣದಿಂದಲೇ ಇಂದು ಅಧಿಕಾರದಲ್ಲಿರಲು ಅವರಿಗೆ ಸಾಧ್ಯವಾಗಿರುವುದು. ನಾವು ಗಮನಿಸಬೇಕಾದ ವಿಷಯವೊಂದಿದೆ: ಈ ಆಡಳಿತಗಳು ಸರ್ವಾಧಿಕಾರಿ ಆಡಳಿತಗಳಲ್ಲ. ಇವುಗಳನ್ನು ಯಾವುದೇ ಸೈನ್ಯ ಅಧಿಕಾರದಲ್ಲಿ ತಂದು ಕೂರಿಸಿರುವುದಿಲ್ಲ. ಜನರೇ ಈ ಆಡಳಿತಗಳನ್ನು ಚುನಾಯಿಸಿ ಕಳುಹಿಸಿದ್ದಾರೆ. ಇಂತಹ ಪರಿಸ್ಥಿತಿಯ ನಿರ್ಮಾಣ ಹೇಗಾಯಿತು? ಒಂದೆರಡು ಉದಾಹರಣೆಗಳನ್ನು ನಾನು ನೀಡುತ್ತೇನೆ. ಒಂದು ದೇಶಕ್ಕೆ ಎರಡು ರಾಜಕೀಯ ಪಕ್ಷಗಳು ಎನ್ನುವ ಸಾರ್ವತ್ರಿಕ ಕಲ್ಪನೆ ಜನರಲ್ಲಿ ಉಳಿದು ಬಿಟ್ಟಿದೆ. ಅಮೆರಿಕದಲ್ಲಿ- ರಿಪಬ್ಲಿಕನ್ ಮತ್ತು ಡೆಮಾಕ್ರಟ್. ಭಾರತದಲ್ಲಿ- ಬಿಜೆಪಿ ಮತ್ತು ಕಾಂಗ್ರೆಸ್. ಇಂತಹ ಬೈನರಿ (ಎರಡೇ ಆಯ್ಕೆಗಳಿಗೆ ಸೀಮಿತಗೊಳ್ಳುವುದು)ಗಳಲ್ಲಿ ಎಷ್ಟು ಸಿಲುಕಿಕೊಂಡಿದ್ದೇವೆ ಎಂದರೆ ಮೂರನೇ ಸೃಜನಶೀಲ ಅವಕಾಶವನ್ನು ನಿರ್ಮಿಸುವ ಕುರಿತು ಆಲೋಚಿಸುತ್ತಲೇ ಇಲ್ಲ. ನಾನಿಲ್ಲಿ ಹೇಳುತ್ತಿರುವುದು ಕೇವಲ ತೃತೀಯ ರಾಜಕೀಯ ವ್ಯವಸ್ಥೆ ಅಷ್ಟೇ ಅಲ್ಲ, ಈ ಎರಡೂ ದ್ರುವಗಳ ನಡುವೆ ಮೂರನೆಯ ಅವಕಾಶವೊಂದರ ಸೃಷ್ಟಿಯ ಕುರಿತು ನಾನಿಲ್ಲಿ ಹೇಳುತ್ತಿದ್ದೇನೆ. ಎರಡು ಪಕ್ಷಗಳ ಸೀಮಿತ ವ್ಯವಸ್ಥೆಯಾಚೆಗೆ ನಿಂತು ನಾನಿಲ್ಲಿ ಹೇಳುತ್ತಿದ್ದೇನೆ. ಜರ್ಮನಿಯಂತಹ ದೇಶಗಳಲ್ಲಿ ಗ್ರೀನ್ ಪಾರ್ಟಿಯಂತಹ ರಾಜಕೀಯ ಪಕ್ಷಗಳು ಇಂತಹ ಕಾರ್ಯವನ್ನು ನಿರ್ವಹಿಸಿದ ಉದಾಹರಣೆಗಳೂ ಇವೆ. ಆದರೆ ಒಂದು ಆಮೂಲಾಗ್ರ ಬದಲಾವಣೆಯನ್ನು ತರುವಂತಹ ಮೂರನೇ ಶಕ್ತಿ ಅಥವಾ ಮೂರನೇ ಅವಕಾಶವಿಂದು ಅಸ್ಥಿರಗೊಂಡುಬಿಟ್ಟಿದೆ. ಒಂದು ವೇಳೆ ಕಣದಲ್ಲಿ ಎರಡೇ ಪಕ್ಷಗಳು ಇರುವ ಸ್ಥಿತಿ ನಿರ್ಮಾಣವಾಯಿತು ಎಂದಿಟ್ಟುಕೊಳ್ಳಿರಿ. ಇವುಗಳಲ್ಲಿ ಒಂದರ ನಾಯಕತ್ವ ವಿಶ್ವಾಸಕ್ಕೆ ಅರ್ಹವಾಗದೇ ಹೋದಾಗ, ಸಮತೋಲನ ತಪ್ಪಿಹೋಗುತ್ತದೆ. ಹೀಗೆ ನಿರ್ಮಾಣವಾಗುವ ಅಸಮತೋಲನ ಭೀಕರವಾಗಿರುತ್ತದೆ. ಇದರಿಂದ ಆತಂಕಕ್ಕೆ ಒಳಗಾಗುವ ಜನರು ಎರಡರ ನಡುವೆ ಪ್ರಬಲ ಅನ್ನಿಸುವುದರ ಪರವಾಗಿ ಮತ ಚಲಾಯಿಸುತ್ತಾರೆ. ಹೀಗೆ ರೂಪುಗೊಳ್ಳುವ ಪ್ರಬಲ ಪರ್ಯಾಯವು ಪ್ರಜಾಪ್ರಭುತ್ವ ವಿರೋಧಿಯಾಗಿರುವ ಸಾಧ್ಯತೆಗಳೇ ಹೆಚ್ಚಾಗಿರುತ್ತದೆ. ರಿಪಬ್ಲಿಕನ್ ಪಕ್ಷಕ್ಕೆ ಮತ ಚಲಾಯಿಸುವುದಕ್ಕಿಂತ ಹೆಚ್ಚಿನ ಜನರು ಟ್ರಂಪ್ ಪರವಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಅಮೆರಿಕದ ಮತದಾರರು ಏನನ್ನು ಹೇಳಿದ್ದಾರೆ ಎನ್ನುವುದನ್ನು ನಾವು ಗುರುತಿಸುವ ಅಗತ್ಯವಿದೆ. ಅವರೊಂದು ಅಸಾಧ್ಯವಾದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ. ಒಂದು ವೇಳೆ ಜಾರ್ಜಿಯಾ ರಾಜ್ಯದ ಸೆನೆಟ್ ಸ್ಥಾನಗಳ ಚುನಾವಣೆ ರಿಪಬ್ಲಿಕನ್‌ಗಳ ಪರವಾದರೆ ರಿಪಬ್ಲಿಕನ್ನರು ಬಹುಮತವನ್ನು ಹೊಂದಿರುವ ಸೆನೆಟ್ ಮತ್ತು ಡೆಮಾಕ್ರಟ್ ಅಧ್ಯಕ್ಷ ಅಧಿಕಾರದಲ್ಲಿರುವ ಸ್ಥಿತಿ ನಿರ್ಮಾಣವಾಗುತ್ತದೆ. ಅಮೆರಿಕದ ಮತದಾರರು ನಾವು ಉಸಿರುಗಟ್ಟುವ ಸ್ಥಿತಿಯಲ್ಲಿದ್ದೇವೆ ಎಂದು ಹೇಳುತ್ತಿದ್ದಾರೆನ್ನುವುದು ನನ್ನ ಗ್ರಹಿಕೆಯಾಗಿರುತ್ತದೆ. ನಮಗೀಗ ಪರ್ಯಾಯ ವ್ಯವಸ್ಥೆ ಬೇಕಿದೆ; ನಮ್ಮಗೊಂದು ಭಿನ್ನವಾದ ರಾಜಕೀಯ ಕಲ್ಪನೆ ಮತ್ತು ಅಸ್ಮಿತೆಯ ಅಗತ್ಯವಿದೆ ಎಂದು ಅವರು ಕೂಗಿ ಹೇಳುತ್ತಿದ್ದಾರೆ. ನಮಗೀಗ ಅಂತಹ ಪರ್ಯಾಯಗಳು ಲಭ್ಯವಿರದ ಕಾರಣದಿಂದ ಇಂತಹ ಇಕ್ಕಟ್ಟಿನ ಸ್ಥಿತಿಯನ್ನು ನಿರ್ಮಿಸುತ್ತಿದ್ದೇವೆ ಎನ್ನುತ್ತಿದ್ದಾರೆ. ನಿನ್ನೆ ನೀವು ಸಿಎನ್‌ಎನ್ ವಾಹಿನಿಯಲ್ಲಿ ಬೈಡನ್ ಮತ್ತು ಕಮಲಾ ಹ್ಯಾರಿಸ್‌ರ ಸಂದರ್ಶನವನ್ನು ಕೇಳಿಸಿಕೊಂಡಿರುವಿರಿ ಎಂದು ಭಾವಿಸಿದ್ದೇನೆ. ಚುನಾಯಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಬ್ಬರೂ ಪರಿಸ್ಥಿತಿ ಸುಲಭವಾಗಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು. ಅವರು ಚಿಂತಿಸಿರುವ ಯಾವುದೇ ಕಲ್ಯಾಣ ಕಾರ್ಯಕ್ರಮ ಜಾರಿಯಾಗಬೇಕೆಂದರೆ ಸೆನೆಟ್‌ನಲ್ಲಿ ಬಹುಮತವಿರಬೇಕು. ಆದರೆ ಅಂತಹ ಪರಿಸ್ಥಿತಿ ಇಲ್ಲ! ಕೇಳಲಾದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಕ್ಕಟ್ಟಾದ ಪರಿಸ್ಥಿತಿಯ ಮಿತಿಯಲ್ಲೇ ಮೂಡಿಬರುತ್ತಿದ್ದವು. ಬಹುಶಃ ಜನರು ಈಗಿನ ಚುನಾವಣಾ ವ್ಯವಸ್ಥೆ (ಇಲೆಕ್ಟೋರಲ್ ಕಾಲೇಜ್ ಚುನಾವಣಾ ವ್ಯವಸ್ಥೆ) ಸೂಕ್ತವಾದುದಲ್ಲವೆಂದು ಹೇಳುತ್ತಿರುವಂತೆ ಕಾಣುತ್ತಿದೆ. ನನಗೆ ಇಂದಿಗೂ ಅರ್ಥವಾಗದ ವಿಷಯವೊಂದು ಭಾರತದ ಕುರಿತು ಇದೆ. ಅಲ್ಲಿನ ಕಾಂಗ್ರೆಸ್ ಪಕ್ಷ ತನ್ನನ್ನು ತಾನು ಮರು ರೂಪಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗದಿರುವ ಕಾರಣವೇನು? ಬಿಜೆಪಿಯ ಮೇಲೆ ಕೆಸರು ಎಸೆಯುವುದರಲ್ಲೇ ಕಾಲ ಕಳೆಯುವುದನ್ನು ಅದು ಬಿಡಬೇಕಿದೆ. ಕಾಂಗ್ರೆಸ್ ತನ್ನ ಐತಿಹಾಸಿಕ ತಪ್ಪುಗಳಿಂದ ಪಾಠ ಕಲಿಯುವ ಅಗತ್ಯವಿದೆ. ಅದು ತನ್ನ ಮತ್ತು ತನ್ನ ನಾಯಕರ ಐತಿಹಾಸಿಕ ಮಹತ್ವವನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಲು ಸೋತಿರುವುದು ಸತ್ಯವಾಗಿರುತ್ತದೆ. ಇಂತಹದೊಂದು ಸನ್ನಿವೇಶದಲ್ಲಿ ಜನರು ಸಿಲುಕಿದಾಗ, ಲಭ್ಯವಿರುವ ಪ್ರಬಲ ಪರ್ಯಾಯಕ್ಕೆ ಬೆಂಬಲವನ್ನು ನೀಡುತ್ತಾರೆ. ನಾನೀಗಾಗಲೇ ಹೇಳಿದಂತೆ, ಕಾರ್ಯಸಾಧುವಾದ ಆಯ್ಕೆಯ ಆಕರ್ಷಣೆ ಎಲ್ಲಾ ತಾತ್ವಿಕತೆಯನ್ನು ಮೀರುವಂತೆ ಮಾಡುತ್ತದೆ. ಹಾಗಾಗಿಯೇ ಪರಿಸ್ಥಿತಿಬದಲಾಗಲು ಅವಕಾಶವಿರುತ್ತದೆ. ಅಮೆರಿಕದ ಜನರು ನಾವೀಗ ಬದಲಾವಣೆಯ ಹಾದಿಯಲ್ಲಿ ದ್ದೇವೆ. ಆದರೆ ಯಾವುದು ನಮ್ಮ ಹಾದಿ ಎಂದು ಪೂರ್ಣವಾಗಿ ತಿಳಿಯುತ್ತಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದ್ದಾರೆ.


ಸಿದ್ಧಾರ್ಥ ಭಾಟಿಯ: ಸ್ವಲ್ಪ ತಡೆಯಿರಿ. ನೀವು ಮಧ್ಯದಲ್ಲಿ ಹೇಳಿದ ವಿಷಯವನ್ನು ಕುರಿತು ಕೇಳುವುದಿದೆ. ಆತಂಕದ ಕಾರಣದಿಂದ ಎನ್ನುವ ಮಾತೊಂದನ್ನು ನೀವು ಬಳಸಿದಿರಿ. ಜನರನ್ನು ಸದಾಕಾಲ ಆತಂಕದ ಸ್ಥಿತಿಯಲ್ಲಿಯೇ ಇಡುವ ತಂತ್ರವನ್ನು ಇವತ್ತಿನ ಪ್ರಬಲ ರಾಜಕೀಯ ನಾಯಕರು ಬಳಸುತ್ತಿದ್ದಾರೆ. ಹಾಗೆ ಜನರು ಸಿದ್ಧರಿರದ ಸ್ಥಿತಿಯಲ್ಲಿರುವಂತೆ ಸಹಾ ನೋಡಿಕೊಳ್ಳುತ್ತಾರೆ. ನೀವೇ ಹಿಂದೆ ಹೇಳಿರುವಂತೆ, ಕೇವಲ ಐದು ಗಂಟೆಗಳ ನೋಟಿಸ್ ನೀಡಿ ನೋಟು ಅಮಾನ್ಯೀಕರಣ ಮಾಡಿದ ಭಾರತದ ರೀತಿ ಇದಕ್ಕೆ ಅತ್ಯುತ್ತಮವಾದ ಉದಾಹರಣೆಯಾಗಿರುತ್ತದೆ. ಹೀಗೆ ಜನರನ್ನು ಅಪೂರ್ಣ ಸಿದ್ಧತೆಯ ಸ್ಥಿತಿಯಲ್ಲಿಟ್ಟುಕೊಳ್ಳುವ ಕುರಿತು ನೀವಾಗಲೇ ಸಾಕಷ್ಟು ಬರೆದಿದ್ದೀರಿ. ಹೀಗೆ ಜನರನ್ನು ನಿರಂತರ ಆತಂಕದಲ್ಲಿ ಮತ್ತು ಸಿದ್ಧತೆರಹಿತ ಸ್ಥಿತಿಯಲ್ಲಿರಿಸುವುದು ಸಾಮಾನ್ಯವಾದ ತಂತ್ರವಾಗಿರುತ್ತದೆಯೇ?

ಹೋಮಿ ಬಾಬಾ: ಖಂಡಿತಾ. ಇದು ಮುಖ್ಯವಾದ ಅಂಶವೊಂದರೆಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಒಂದು ಹಂತದಲ್ಲಿ ಇದೊಂದು ಅಮೂರ್ತವಾದ ವಿಚಾರವೆಂದು ನಿಮಗೆ ಅನ್ನಿಸಲೂ ಬಹುದು. ಇಂದಿನ ಇತಿಹಾಸ ನಮಗೆ ಇದರ ಕುರಿತು ಆಲೋಚಿಸಲು ಅವಕಾಶ ನೀಡುವುದಿಲ್ಲ. ಹಾಗಾಗಿ ನಾವು ಒಂದಿಷ್ಟು ಹಿಂದೆಕ್ಕೆ ಹೋಗಿ ನಿಂತು ನೋಡಬೇಕಾದ ಅನಿವಾರ್ಯತೆಯಿರುತ್ತದೆ. ಕೋವಿಡ್ ಸೋಂಕಿನ ಕಾರಣದಿಂದ ಭಾರತದ ನಗರಗಳಲ್ಲಿ ಜನದಟ್ಟಣೆಯನ್ನು ಕಡಿಮೆಗೊಳಿಸುವ ಆದೇಶವನ್ನು ಜಾರಿಗೆ ತರಲು ಕೇವಲ ನಾಲ್ಕು ತಾಸುಗಳ ಅವಕಾಶ ನೀಡಲಾಗಿತ್ತು. ನೈಜಿರೀಯಾದಲ್ಲಿಯೂ ಕೇವಲ ನಾಲ್ಕು ತಾಸುಗಳ ಅವಕಾಶ ನೀಡಿ, ಆನಂತರ ಜನರ ಮೇಲೆ ದಾಳಿಗಳನ್ನು ನಡೆಸಲಾಗಿತ್ತು. ಚೀನಾ ದೇಶದಲ್ಲಂತೂ ಕೋವಿಡ್ ಸೋಂಕಿನ ಕುರಿತು ಎರಡು ವಾರಗಳವರೆಗೆ ಜನರಿಗೆ ಯಾವುದೇ ಮಾಹಿತಿಯನ್ನು ನೀಡಿರಲೇ ಇಲ್ಲ! ಇನ್ನು ಅಮೆರಿಕದ ಕಥೆ ಬೇರೆಯೇ ಇದೆ. ಕೋವಿಡ್ ಸೋಂಕಿನ ಗಂಭೀರತೆಯ ಕುರಿತಾದ ಎಚ್ಚರಿಕೆ ದೊರೆತರೂ ಐದು ವಾರಗಳವರೆಗೆ ಇದನ್ನು ರಹಸ್ಯವಾಗಿಡುವುದಷ್ಟೇ ಅಲ್ಲದೆ, ವಿಷಯ ಗಂಭೀರವಾಗಿದೆ ಎಂದವರನ್ನು ಲೇವಡಿ ಕೂಡ ಮಾಡಲಾಯಿತು! ಈ ಉದಾಹರಣೆಗಳಲ್ಲಿ ನಿಮಗೆ ಎದ್ದು ಕಾಣುವ ಅಂಶ ಯಾವುದು? ರಾಜಕೀಯ ನಿರ್ಧಾರ ಕೈಗೊಳ್ಳುವ ಮತ್ತು ಜಾರಿಗೊಳಿಸುವ ಅವಧಿ ಸಂಕುಚಿತಗೊಳ್ಳುತ್ತಿದೆ. ನಾವು ಸಾಮಾನ್ಯವಾಗಿ ಪಂಚ ವಾರ್ಷಿಕ ಯೋಜನೆಗಳ ಕುರಿತು ಮತ್ತು ವಾರ್ಷಿಕ ಬಜೆಟ್ ಕುರಿತು ಚರ್ಚಿಸುತ್ತೇವೆ. ಆದರೀಗ ಸಿದ್ಧಗೊಳ್ಳದ ಆಡಳಿತವನ್ನು ಜಾರಿಗೆ ತರಲಾಗುತ್ತಿದೆ. ಅದೂ ಅತ್ಯಂತ ಕನಿಷ್ಠ ಅವಧಿಯಲ್ಲಿ! ಇವುಗಳ ಜಾರಿ ಹಿಂದೆ ಯಾವುದೇ ಪ್ರಜಾಪ್ರಭುತ್ವ ವಿರೋಧಿ ನೆಲೆಗಳು ಇರುವುದಿಲ್ಲವಾದರೂ, ಯಾವುದೇ ಕಾನೂನಿನ ಉಲ್ಲಂಘನೆ ಇರುವುದಿಲ್ಲವಾದರೂ, ನೈತಿಕವಾದ ಉಲ್ಲಂಘನೆಗಳು ಎದ್�

Writer - ಅನುವಾದ: ಸದಾನಂದ ಆರ್.

contributor

Editor - ಅನುವಾದ: ಸದಾನಂದ ಆರ್.

contributor

Similar News