ವರ್ಷದ ಕೊನೆಯ ವೇಳೆಗೆ ಆ್ಯಸ್ಟ್ರಝೆನೆಕ ಲಸಿಕೆಗೆ ಅನುಮೋದನೆ?
ಲಂಡನ್, ಡಿ. 19: ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಬ್ರಿಟನ್‌ನ ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಝೆನೆಕ ಅಭಿವೃದ್ಧಿಪಡಿಸುತ್ತಿರುವ ಕೊರೋನ ವೈರಸ್ ಲಸಿಕೆಗೆ ದೇಶದ ಔಷಧ ನಿಯಂತ್ರಣ ಇಲಾಖೆ ‘ಮೆಡಿಸಿನ್ಸ್ ಆ್ಯಂಡ್ ಹೆಲ್ತ್‌ಕೇರ್ ರೆಗ್ಯುಲೇಟರಿ ಏಜನ್ಸಿ (ಎಮ್‌ಎಚ್‌ಆರ್‌ಎ) ಈ ವರ್ಷದ ಕೊನೆಯ ವೇಳೆಗೆ ಅನುಮೋದನೆ ನೀಡುವ ನಿರೀಕ್ಷೆಯಿದೆ ಎಂದು ಹಿರಿಯ ಸರಕಾರಿ ಅಧಿಕಾರಿಯೋರ್ವರನ್ನು ಉಲ್ಲೇಖಿಸಿ ‘ದ ಡೇಲಿ ಟೆಲಿಗ್ರಾಫ್’ ಪತ್ರಿಕೆ ಶನಿವಾರ ವರದಿ ಮಾಡಿದೆ.
ಕೊರೋನ ವೈರಸ್ ವಿರುದ್ಧ ಬಳಸಲಾಗುವ ಲಸಿಕೆಯು ಸುರಕ್ಷಿತ ಹಾಗೂ ಪರಿಣಾಮಕಾರಿಯಾಗಿದೆ ಎನ್ನುವುದು ಇತ್ತೀಚೆಗೆ ನಡೆದ ಕೊನೆಯ ಹಂತದ ಮಾನವ ಪ್ರಯೋಗಗಳಲ್ಲಿ ಸಾಬೀತಾದ ಬಳಿಕ, ಲಸಿಕೆಗೆ ಅನುಮೋದನೆ ನೀಡುವ ಜವಾಬ್ದಾರಿಯನ್ನು ಸರಕಾರವು ಎಮ್‌ಎಚ್‌ಆರ್‌ಎಗೆ ವಹಿಸಿತ್ತು. ಪ್ರಯೋಗಕ್ಕೆ ಸಂಬಂಧಿಸಿದ ಅಂತಿಮ ಅಂಕಿ-ಸಂಖ್ಯೆಗಳನ್ನು ಸೋಮವಾರ ನೀಡಿದರೆ, ಅದು ಡಿಸೆಂಬರ್ 28 ಅಥವಾ 29ರಂದು ಲಸಿಕೆಗೆ ಅನುಮೋದನೆ ನೀಡುವ ಸಾಧ್ಯತೆಯಿದೆ ಅಧಿಕಾರಿ ಹೇಳಿದ್ದಾರೆ.