×
Ad

​ಜಪಾನ್‌ನಲ್ಲಿ ಪ್ರಬಲ ಭೂಕಂಪ

Update: 2020-12-21 09:14 IST

ಅವೋಮೊರಿ (ಜಪಾನ್) : ವಾಯವ್ಯ ಜಪಾನ್‌ನ ಅವೋಮೊರಿ ಪ್ರಿಫೆಕ್ಚರ್ ಪ್ರದೇಶದಲ್ಲಿ ಸೋಮವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್‌ನ ಹವಾಮಾನ ಏಜೆನ್ಸಿ (ಜೆಎಂಎ) ಪ್ರಕಟಿಸಿದೆ.

ಸ್ಥಳೀಯ ಕಾಲಮಾನದ ಪ್ರಕಾರ ನಸುಕಿನ 2.23ರ ವೇಳೆಗೆ ಭೂಕಂಪ ಸಂಭವಿಸಿದ್ದು, ಭೂಕಂಪದ ಕೇಂದ್ರ ಬಿಂದು 30.7 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 142.7 ಡಿಗ್ರಿ ಪೂರ್ವ ರೇಖಾಂಶದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿತ್ತು ಎಂದು ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News