ಐದರ ಬಾಲಕಿಯ ಅತ್ಯಾಚಾರ-ಕೊಲೆ: ಆರೋಪಿಯ ಮನೆಯಲ್ಲಿ ಶವ ಪತ್ತೆ

Update: 2020-12-21 16:39 GMT
ಸಾಂದರ್ಭಿಕ ಚಿತ್ರ

ಚಂಡಿಗಡ,ಡಿ.21: ಹರ್ಯಾಣದ ಝಜ್ಜರ್ ನಗರದಲ್ಲಿ 30ರ ಹರೆಯದ ವ್ಯಕ್ತಿಯೋರ್ವ ತನ್ನ ನೆರೆಕರೆಯ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದರು.

ಕ್ರಿಮಿನಲ್ ಹಿನ್ನೆಲೆಯ ಆರೋಪಿಯು ಬಾಲಕಿಯನ್ನು ರಾತ್ರಿ ಆಕೆಯ ಮನೆಯಿಂದ ಅಪಹರಿಸಿ ತನ್ನ ಮನೆಗೊಯ್ದು ಈ ಹೇಯ ಕೃತ್ಯವನ್ನು ನಡೆಸಿದ್ದಾನೆ. ಆರೋಪಿಯ ಮನೆಯಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು,ಆತನನ್ನು ಬಂಧಿಸಲಾಗಿದೆ ಎಂದರು.

ಬಾಲಕಿಯ ತಂದೆ ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕನಾಗಿದ್ದರೆ,ಆರೋಪಿಯು ಝಜ್ಜರ್ ನಿವಾಸಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News