ಐಎಸ್ ಎಲ್: ಎಟಿಕೆ ಮೋಹನ್ ಬಗಾನ್ ತಂಡಕ್ಕೆ ಜಯ

Update: 2020-12-21 17:40 GMT

ಪಣಜಿ: ಈ ಋತುವಿನಲ್ಲಿ ಅನಿಶ್ಚಿತ ಫಾರ್ಮ್ ನಲ್ಲಿರುವ ಡೇವಿಡ್ ವಿಲಿಯಮ್ಸ್ 33ನೇ ನಿಮಿಷದಲ್ಲಿ ದಾಖಲಿಸಿದ ಗೋಲು ನೆರವಿನಿಂದ ಎಟಿಕೆ ಮೋಹನ್ ಬಗಾನ್ ತಂಡ ಸೋಮವಾರ ನಡೆದ ಐಎಸ್ ಎಲ್  ಪಂದ್ಯದಲ್ಲಿ ಬೆಂಗಳೂರು ಎಫ್ ಸಿ ವಿರುದ್ಧ 1-0 ಅಂತರದಿಂದ ಜಯ ಸಾಧಿಸಿತು.

ವಿಲಿಯಮ್ಸ್ ಐಎಸ್ ಎಲ್ ನಲ್ಲಿ ಗಳಿಸಿರುವ 8ನೇ ಗೋಲು ಇದಾಗಿದೆ. ಬೆಂಗಳೂರು ತಂಡದ ವಿರುದ್ವವೇ ನಾಲ್ಕುಗೋಲು ಗಳಿಸಿದ್ದರು.

7 ಪಂದ್ಯಗಳಲ್ಲಿ 16 ಅಂಕ ಗಳಿಸಿರುವ ಕೋಲ್ಕತಾದ  ಮೋಹನ್ ಬಗಾನ್ ತಂಡ ಮುಂಬೈ ಸಿಟಿಯೊಂದಿಗೆ ಅಗ್ರ ಸ್ಥಾನವನ್ನು ಹಂಚಿಕೊಂಡಿದೆ. ಮೊದಲ ಸೋಲು ಕಂಡಿರುವ ಬೆಂಗಳೂರು ತಂಡ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News