2 ಮಾಜಿ ಸಹಾಯಕರು ಸೇರಿ 15 ಮಂದಿಗೆ ಟ್ರಂಪ್ ಕ್ಷಮೆ

Update: 2020-12-23 17:16 GMT

ವಾಶಿಂಗ್ಟನ್, ಡಿ. 23: ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತನ್ನ ಅನುಯಾಯಿಗಳು ಸೇರಿದಂತೆ 15 ಮಂದಿಗೆ ಕ್ಷಮಾದಾನ ನೀಡಿದ್ದಾರೆ ಹಾಗೂ ಇಬ್ಬರ ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಿದ್ದಾರೆ.

ಈ ಪೈಕಿ ಇಬ್ಬರು, 2016ರ ಅವೆುರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುವುದಕ್ಕಾಗಿ ರಶ್ಯ ಸರಕಾರದೊಂದಿಗೆ ಸಂಪರ್ಕ ಹೊಂದಿದ್ದವರು. ಅದನ್ನು ಅವರು ವಿಶೇಷ ವಕೀಲ ರಾಬರ್ಟ್ ಮುಲ್ಲರ್‌ರ ತನಿಖೆಯಲ್ಲಿ ಒಪ್ಪಿಕೊಂಡಿದ್ದರು.

 ಟ್ರಂಪ್‌ರ 2016ರ ಚುನಾವಣಾ ಪ್ರಚಾರ ತಂಡದ ಸದಸ್ಯ ಜಾರ್ಜ್ ಪ್ಯಾಪಡೋಪಲಸ್ ಹಾಗೂ ಮಾಜಿ ಸಂಸದರಾದ ಡಂಕನ್ ಹಂಟರ್ ಮತ್ತು ಕ್ರಿಸ್ ಕಾಲಿನ್ಸ್ ಕ್ಷಮಾದಾನ ಪಡೆದವರಲ್ಲಿ ಸೇರಿದ್ದಾರೆ.

ಇರಾಕ್‌ನಲ್ಲಿ ನಡೆದ ನಾಗರಿಕರ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದರೆನ್ನಲಾದ ನಾಲ್ವರು ಬ್ಲಾಕ್‌ವಾಟರ್ ಗಾರ್ಡ್ಸ್‌ಗಳಿಗೂ ಟ್ರಂಪ್ ಕ್ಷಮೆ ಘೋಷಿಸಿದ್ದಾರೆ.

ಕಳೆದ ತಿಂಗಳು ಟ್ರಂಪ್ ತನ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್‌ಗೂ ಕ್ಷಮೆ ನೀಡಿದ್ದರು. ರಶ್ಯದೊಂದಿಗೆ ಸಂಪರ್ಕ ಹೊಂದಿದ ಆರೋಪ ಎದುರಿಸುತ್ತಿದ್ದ ಅವರ ವಿರುದ್ಧ ರಾಬರ್ಟ್ ಮಲ್ಲರ್ ದೋಷಾರೋಪ ಹೊರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News