ರಶ್ಯ ಪ್ರತಿಪಕ್ಷ ನಾಯಕ ನವಾಲ್ನಿಗೆ ವಿಷಪ್ರಾಶನ: ಬರ್ಲಿನ್ ವೈದ್ಯರಿಂದ ಪುರಾವೆ ಬಿಡುಗಡೆ

Update: 2020-12-24 16:59 GMT

ಬರ್ಲಿನ್ (ಜರ್ಮನಿ), ಡಿ. 24: ರಶ್ಯದ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿಗೆ ‘ನೊವಿಚೊಕ್’ ರಾಸಾಯನಿಕ ಪ್ರಾಶನವಾಗಿರುವುದಕ್ಕೆ ಸಂಬಂಧಿಸಿ, ಅವರಿಗೆ ಚಿಕಿತ್ಸೆ ನೀಡಿರುವ ಜರ್ಮನಿಯ ವೈದ್ಯರು ಬುಧವಾರ ತಮ್ಮ ಚಿಕಿತ್ಸೆಯ ವಿವರಗಳನ್ನು ಪ್ರಕಟಿಸಿಸಿದ್ದಾರೆ.

ನನಗೆ ವಿಷಪ್ರಾಶನವಾಗಿರುವುದಕ್ಕೆ ಇದು ವೈದ್ಯಕೀಯ ಪುರಾವೆಯಾಗಿದೆ ಎಂದು ನವಾಲ್ನಿ ಹೇಳಿದರೆ, ಇದನ್ನು ಎಂದಿನಂತೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿರಸ್ಕರಿಸಿದ್ದಾರೆ.

ವೈದ್ಯಕೀಯ ಪತ್ರಿಕೆ ‘ದ ಲ್ಯಾನ್ಸೆಟ್’ನಲ್ಲಿ ಪ್ರಕಟಗೊಂಡಿರುವ ಲೇಖನದಲ್ಲಿ, ನವಾಲ್ನಿಗೆ ಚಿಕಿತ್ಸೆ ನೀಡಿರುವ ಬರ್ಲಿನ್ ಆಸ್ಪತ್ರೆಯ ವೈದ್ಯರು, ಆಗಸ್ಟ್‌ನಲ್ಲಿ ನವಾಲ್ನಿಯನ್ನು ಆಸ್ಪತ್ರೆಗೆ ದಾಖಲಿಸುವಾಗ ವೀಕ್ಷಿಸಲಾದ ಲಕ್ಷಣಗಳ ವಿವರಗಳನ್ನು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News