×
Ad

ಪತ್ರಕರ್ತ ಪರ್ಲ್ ಹಂತಕರ ಬಿಡುಗಡೆಗೆ ನ್ಯಾಯಾಲಯ ಆದೇಶ: ಅಮೆರಿಕ ಕಳವಳ

Update: 2020-12-25 23:01 IST
ಫೊಟೋ ಕೃಪೆ: twitter

ವಾಶಿಂಗ್ಟನ್, ಡಿ. 25: ಅಮೆರಿಕದ ಪತ್ರಕರ್ತ ಡೇನಿಯಲ್ ಪರ್ಲ್ ಹತ್ಯೆಯಲ್ಲಿ ಶಾಮೀಲಾಗಿರುವ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ಸಿಂಧ್ ಹೈಕೋರ್ಟ್ ತೀರ್ಪಿನ ಬಗ್ಗೆ ಅಮೆರಿಕ ಗುರುವಾರ ತೀವ್ರ ಆತಂಕ ವ್ಯಕ್ತಪಡಿಸಿದೆ.

‘ವಾಲ್ ಸ್ಟ್ರೀಟ್ ಜರ್ನಲ್’ನ ದಕ್ಷಿಣ ಏಶ್ಯ ವರದಿಗಾರ ಪರ್ಲ್‌ರನ್ನು ಅಪಹರಿಸಿ ಶಿರಚ್ಛೇದ ಗೈದ ಭಯೋತ್ಪಾದಕರಾದ ಅಹ್ಮದ್ ಉಮರ್ ಸಯೀದ್ ಶೇಖ್, ಫಾಹದ್ ನಸೀಮ್, ಶೇಖ್ ಆದಿಲ್ ಮತ್ತು ಸಲ್ಮಾನ್ ಸಾಕಿಬ್‌ರನ್ನು ಬಿಡುಗಡೆ ಮಾಡುವಂತೆ ಸಿಂಧ್ ಹೈಕೋರ್ಟ್ ಗುರುವಾರ ಆದೇಶ ನೀಡಿತ್ತು.

‘‘ಡೇನಿಯಲ್ ಪರ್ಲ್ ಅಪಹರಣ ಮತ್ತು ಹತ್ಯೆಯಲ್ಲಿ ಶಾಮೀಲಾಗಿರುವ ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಸಿಂಧ್ ಹೈಕೋರ್ಟ್ ಆದೇಶ ನೀಡಿದೆ ಎಂಬ ವರದಿಗಳಿಂದ ನಾವು ಆತಂಕಿತರಾಗಿದ್ದೇವೆ. ಆರೋಪಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿಲ್ಲ ಎಂಬುದಾಗಿ ನಮಗೆ ಭರವಸೆ ನೀಡಲಾಗಿದೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳ ಬ್ಯೂರೋ ಟ್ವೀಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News