×
Ad

ಹೊಸ ರೂಪದ ಕೊರೋನ ವಿರುದ್ಧ ಅಸ್ಟ್ರಾಝೆಂಕಾದಿಂದ ಪ್ರತಿಕಾಯ ಸೃಷ್ಟಿ

Update: 2020-12-26 23:25 IST

  ಲಂಡನ್,ಡಿ.26: ಅಸ್ಟ್ರಾಝೆಂಕಾ ಕಂಪೆನಿಯು ಅಭಿವೃದ್ಧಿಪಡಿಸಿರುವ ಎಝಡ್‌ಡಿ7442 ಎಂಬ ದೀರ್ಘಾವಧಿಯವರೆಗೆ ಕಾರ್ಯನಿರ್ವಹಿಸಬಲ್ಲ ಪ್ರತಿಕಾಯವು (ಎಲ್‌ಎಎಬಿ)ವು ಇತ್ತೀಚೆಗೆ ಪತ್ತೆಯಾಗಿರುವ ರೂಪಾಂತರಿತ ಕೊರೋನ ವೈರಸ್‌ನ ಪ್ರಭೇದ ಸಾರ್ಸ್-ಕೋವ್-2ನಿಂದ ಸೋಂಕಿತರಾದವರಿಗೆ ತಕ್ಷಣ ಮತ್ತು ಸುದೀರ್ಘ ಸಮಯದವರೆಗೆ ರಕ್ಷಣೆಯನ್ನು ನೀಡಲಿದೆ ಮತ್ತು ಅವರಲ್ಲಿ ಕೋವಿಡ್-19 ಬೆಳವಣಿಗೆಯಾಗುವುದನ್ನು ತಡೆಗಟ್ಟಲಿದೆ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್ ಹಾಸ್ಪಿಟಲ್ಸ್ (ಯುಎಲ್‌ಸಿಎಚ್) ಶನಿವಾರ ತಿಳಿಸಿದೆ.

ನೂತನ ಲಸಿಕೆ ಸಂಶೋಧನಾ ಕೇಂದ್ರವು ಎಲ್‌ಎಎಬಿ ಸಂಯೋಜಿತ ಚಿಕಿತ್ಸಾ ವಿಧಾನದ ಎರಡು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿದೆಯೆಂದು ಯುಎಲ್‌ಸಿಎಚ್ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News