ರೂಪಾಂತರಿತ ಕೊರೋನ ಭೀತಿ: ಬಂಧು,ಮಿತ್ರರಿಂದ ದೂರವುಳಿದು ಕ್ರಿಸ್ಮಸ್ ಆಚರಿಸಿದ ಲಕ್ಷಾಂತರ ಬ್ರಿಟಿಷ್ ನಾಗರಿಕರು
Update: 2020-12-26 23:44 IST
ಲಂಡನ್,ಡಿ.26: ದೇಶದಲ್ಲಿ ಕೊರೋನ ವೈರಸ್ ಹಾವಳಿ ಪ್ರಕೋಪಕ್ಕೆ ತಿರುಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಬ್ರಿಟಿಷ್ ನಾಗರಿಕರು ತಮ್ಮ ಸ್ನೇಹಿತರು ಹಾಗೂ ಬಂಧುಗಳಿಂದ ದೂರವುಳಿದುಕೊಂಡೇ ಕ್ರಿಸ್ಮಸ್ ಆಚರಿಸಿದರು.
ಬ್ರಿಟನ್‌ನ ರಾಷ್ಟ್ರೀಯ ಅಂಕಿಅಂಶ ಕಾರ್ಯಾಲಯ (ಓಎನ್‌ಎಸ್) ಬಿಡುಗಡೆಗೊಳಿಸಿರುವ ಅಂಕಿಅಂಶಗಳ ಪ್ರಕಾರ ದೇಶದ ಹಲವೆಡೆ ರೂಪಾಂತರಿತ ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಸೋಂಕಿನ ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗಿರುವುದಾಗಿ ತಿಳಿಸಿದೆ.