ಜಪಾನ್‌ನಲ್ಲೂ ಐವರಲ್ಲಿ ರೂಪಾಂತರಿತ ಕೊರೋನ ಪತ್ತೆ
Update: 2020-12-26 23:46 IST
ಟೋಕಿಯೊ,ಡಿ.26: ರೂಪಾಂತರಿತ ಕೊರೋನ ವೈರಸ್‌ನ ಸೋಂಕಿನ ಪ್ರಕರಣಗಳು ಜಪಾನ್‌ನಲ್ಲಿ ಪತ್ತೆಯಾಗಿರುವುದನ್ನು ಆ ದೇಶದ ಆರೋಗ್ಯ ಸಚಿವಾಲಯವು ಶನಿವಾರ ದೃಢಪಡಿಸಿದೆ. ಬ್ರಿಟನ್‌ನಿಂದ ಆಗಮಿಸುವವರ ವಿರುದ್ಧ ಜಪಾನ್ ಗಡಿನಿಯಂತ್ರಣ ಕ್ರಮಗಳನ್ನು ವಿಧಿಸುವ ಮುನ್ನ, ಅಂದರೆ ಡಿಸೆಂಬರ್ 18ರಿಂದ ಡಿಸೆಂಬರ್ 21ರವರೆಗೆ ದೇಶಕ್ಕೆ ಬಂದಿದ್ದ ಐವರಲ್ಲಿ ಹೊಸ ರೂಪದ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಹೇಳಿಕೆ ತಿಳಿಸಿದೆ.
ಇವರ ಪೈಕಿ 60ರ ಹರೆಯದ ವ್ಯಕ್ತಿಯೊಬ್ಬನಲ್ಲಿ ಬಳಲಿಕೆ ಕಾಣಿಸಿಕೊಂಡಿದ್ದರೆ, ಇತರ ನಾಲ್ವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲವೆಂದು ಜಪಾನ್‌ನ ಆರೋಗ್ಯ ಸಚಿವ ನೊರಿಹಿಸಾ ತಮೂರಾ ತಿಳಿಸಿದ್ದಾರೆ.