ಪಾಕ್ ಸೇನಾ ಹೆಲಿಕಾಪ್ಟರ್ ಪತನ: ನಾಲ್ವರು ಮೃತ್ಯು
Update: 2020-12-27 23:09 IST
ಇಸ್ಲಾಮಾಬಾದ್, ಡಿ.27: ಸೈನಿಕನೊಬ್ಬನ ಮೃತದೇಹವನ್ನು ಒಯ್ಯುತ್ತಿದ್ದ ಪಾಕ್ ಸೇನಾ ಹೆಲಿಕಾಪ್ಟರ್ ಪತನಗೊಂಡು, ಅದರಲ್ಲಿ ನಾಲ್ವರು ಸೇನಾ ಸಿಬ್ಬಂದಿ ಮೃತಪಟ್ಟ ಘಟನೆ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ರವಿವಾರ ನಡೆದಿದೆ.
ಸೈನಿಕನ ಶವವನ್ನು ಸ್ಕಾರ್ಡುವಿನಲ್ಲಿರುವ ಸೇನಾಸ್ಪತ್ರೆಗೆ ಒಯ್ಯುತ್ತಿದ್ದಾಗ ಹೆಲಿಕಾಪ್ಟರ್ ಅಸ್ಟೋರ್ ಜಿಲ್ಲೆಯ ಮಿನಿಮಾರ್ಗ್ ಪ್ರದೇಶದಲ್ಲಿ ಶನಿವಾರ ಸಂಜೆ ಪತನಗೊಂಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಪೈಲಟ್,ಸಹಪೈಲಟ್ ಹಾಗೂ ಇತರ ಇಬ್ಬರು ಸೈನಿಕರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಮೂಲಗಳು ತಿಳಿಸಿವೆ. ತಾಂತ್ರಿಕ ಕಾರಣಗಳಿಂದಾಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿರುವುದಾಗಿ ಪಾಕ್ ಸೇನೆಯ ಹೇಳಿಕೆ ತಿಳಿಸಿದೆ.