ದಲಾಯಿ ಉತ್ತರಾಧಿಕಾರಿ ಆಯ್ಕೆಯಲ್ಲಿ ಚೀನಾ ಹಸ್ತಕ್ಷೇಪ ವಿರೋಧಿಸುವ ಮಸೂದೆಗೆ ಟ್ರಂಪ್ ಸಹಿ

Update: 2020-12-28 15:19 GMT

ವಾಶಿಂಗ್ಟನ್, ಡಿ. 28: ಟಿಬೆಟ್‌ನಲ್ಲಿ ಅಮೆರಿಕದ ಕೌನ್ಸುಲೇಟ್ ಕಚೇರಿಯನ್ನು ಸ್ಥಾಪಿಸುವಂತೆ ಹಾಗೂ ಮುಂದಿನ ದಲಾಯಿ ಲಾಮಾರನ್ನು ಚೀನಾದ ಹಸ್ತಕ್ಷೇಪವಿಲ್ಲದೆ ಟಿಬೆಟ್ ಬೌದ್ಧ ಸಮುದಾಯವೇ ನೇಮಿಸುವಂತೆ ನೋಡಿಕೊಳ್ಳುವುದಕ್ಕಾಗಿ ಅಂತರ್‌ರಾಷ್ಟ್ರೀಯ ಮಿತ್ರಕೂಟವೊಂದನ್ನು ರಚಿಸುವಂತೆ ಕರೆ ನೀಡುವ ಮಸೂದೆಗೆ ಅವೆುರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಅದು ಈಗ ಕಾನೂನಾಗಿದೆ.

ಟಿಬೆಟನ್ ಪಾಲಿಸಿ ಆ್ಯಂಡ್ ಸಪೋರ್ಟ್ ಆ್ಯಕ್ಟ್ 2020, ಟಿಬೆಟ್‌ಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳು ಮತ್ತು ವಿಧಿಗಳಲ್ಲಿ ಮಾರ್ಪಾಡುಗಳನ್ನು ಮಾಡಿದೆ.

ಚೀನಾದ ಪ್ರತಿಭಟನೆಯ ಹೊರತಾಗಿಯೂ ಅವೆುರಿಕದ ಸೆನೆಟ್ ಕಳೆದ ವಾರ ಈ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿತ್ತು.

ಟಿಬೆಟ್‌ನಲ್ಲಿರುವ ಟಿಬೆಟ್ ಸಮುದಾಯಗಳ ಪರವಾಗಿ ಕೆಲಸ ಮಾಡುವ ಸರಕಾರೇತರ ಸಂಘಟನೆಗಳಿಗೆ ನೆರವು ನೀಡಲು ಮಸೂದೆಯು ಅವಕಾಶ ನೀಡುತ್ತದೆ. ಅದೂ ಅಲ್ಲದೆ, ಟಿಬೆಟ್‌ನ ಲಾಸಾದಲ್ಲಿ ಅವೆುರಿಕದ ಕೌನ್ಸುಲೇಟ್ ಕಚೇರಿ ಸ್ಥಾಪನೆಯಾಗುವವರೆಗೆ, ಅವೆುರಿಕದಲ್ಲಿ ಚೀನಾದ ನೂತನ ಕೌನ್ಸುಲೇಟ್ ಕಚೇರಿಗಳ ಸ್ಥಾಪನೆಗೆ ಅವಕಾಶ ನೀಡಬಾರದೆಂದೂ ಮಸೂದೆ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News