ರಜಾದಿನಗಳಲ್ಲಿ ವಿಮಾನ ಪ್ರಯಾಣಿಕರ ದಟ್ಟಣೆ: ಅಮೆರಿಕದಲ್ಲಿ ಕೊರೋನ ಇನ್ನಷ್ಟು ಉಲ್ಬಣ; ತಜ್ಞರ ಎಚ್ಚರಿಕೆ

Update: 2020-12-29 17:45 GMT

ನ್ಯೂಯಾರ್ಕ್,ಡಿ.26: ಹಲವಾರು ವಾರಗಳಿಂದ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯಲ್ಲಿ ಸತತವಾಗಿ ಏರಿಕೆ ಯಾಗುತ್ತಿದ್ದರೂ, ಅಮೆರಿಕದಲ್ಲಿ ವಿಮಾನಯಾನ ಕೈಗೊಳ್ಳುವ ನಾಗರಿಕ ಸಂಖ್ಯೆಯಲ್ಲಿ ದಾಖಲೆಯ ಹೆಚ್ಚಳ ಕಂಡುಬಂದಿದೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ರಜಾದಿನಗಳ ಹಿನ್ನೆಲೆಯಲ್ಲಿ ಅಮೆರಿಕನ್ನರು ಭಾರೀ ಸಂಖ್ಯೆಯಲ್ಲಿ ಪ್ರವಾಸಗಳನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಅಗಾಧವಾದ ಏರಿಕೆಯಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ರವಿವಾರದಂದು 12,84,599 ಪ್ರಯಾಣಿಕರನ್ನು ಸ್ಕ್ರೀನಿಂಗ್ ಮಾಡಿರುವುದಾಗಿ ಸಾರಿಗೆ ಭದ್ರತಾ ಪ್ರಾಧಿಕಾರವು ಸೋಮವಾರ ತಿಳಿಸಿದೆ. ಆದರೂ, ಕೊರೋನ ಹಾವಳಿ ಹಿಂದಿನ ದಿನಗಳಿಗೆ ಹೋಲಿಸಿದರೆ , ಈ ಬಾರಿ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.55ರಿಂದ ಶೇ.65ರಷ್ಟು ಏರಿಕೆಯಾಗಿದೆ. ಆದರೆ, ಮಾರ್ಚ್ ತಿಂಗಳ ಮಧ್ಯದ ಬಳಿಕ ಗರಿಷ್ಠ ಸಂಖ್ಯೆಯ ಪ್ರಯಾಣಿಕರು ರವಿವಾರ ಪ್ರಯಾಣಿಸಿದ್ದಾರೆ. ಕಳೆದ ಹತ್ತು ದಿನಗಳಲ್ಲಿ ದೈನಂದಿನ ಪ್ರವಾಸಿಗರ ಸಂಖ್ಯೆಯು 10 ಲಕ್ಷವನ್ನು ದಾಟಿರುವುದು ಇದು ಆರನೇ ಸಲವಾಗಿದೆ.

ಅಮೆರಿಕದಲ್ಲಿ ಪ್ರಸಕ್ತ 1.10 ಲಕ್ಷ ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ರಜಾದಿನ ಪ್ರವಾಸ ಹಾಗೂ ಸಭೆ,ಸಮಾರಂಭಗಳಿಂದ ಸೋಂಕಿತರ ಸಂಖ್ಯೆಯಲ್ಲಿ ವ್ಯಾಪಕ ಹೆಚ್ಚಳವಾಗಲಿದೆಯೆಂದು ಸಿಎನ್‌ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News