ಬ್ರಿಟನ್: ಕೋವಿಡ್-19 ಮೂರನೆ ಅಲೆ ತಡೆಗಟ್ಟಲು ವಾರದೊಳಗೆ 20 ಲಕ್ಷ ಮಂದಿಗೆ ಲಸಿಕೆ ಅಗತ್ಯ

Update: 2020-12-29 17:54 GMT

ಲಂಡನ್, ಡಿ.29: ಕೊರೋನ ವೈರಸ್ ಸೋಂಕಿನ ಮೂರನೆ ಅಲೆಯ ಹಾವಳಿಯನ್ನು ತಡೆಗಟ್ಟಬೇಕಾದರೆ ಬ್ರಿಟನ್ ಒಂದು ವಾರದೊಳಗೆ 20 ಲಕ್ಷ ಮಂದಿಗೆ ಕೋವಿಡ್-19 ಲಸಿಕೆ ನೀಡಬೇಕು ಎಂದು ಲಂಡನ್‌ನ ನೈರ್ಮಲ್ಯ ಹಾಗೂ ಉಷ್ಣವಲಯದ ಔಷಧಿ ವಿದ್ಯಾಲಯ ( ಎಲ್‌ಎಸ್‌ಎಚ್‌ಟಿಎಂ) ಅಂದಾಜಿಸಿದೆ.

 ಗಣನೀಯ ಪ್ರಮಾಣದಲ್ಲಿ ಕೊರೋನ ಲಸಿಕೆ ಬಿಡುಗಡೆಯಾಗದೆ ಇರುವ ಕಾರಣದಿಂದಾಗಿ 2021ರಲ್ಲಿ ಸೋಂಕಿನ ಪ್ರಕರಣಗಳು, ಆಸ್ಪತ್ರೆ ದಾಖಲಾತಿಗಳು, ಐಸಿಯು ಪ್ರವೇಶಗಳು ಹಾಗೂ ಸಾವಿನ ಸಂಖ್ಯೆಯು 2020ಕ್ಕಿಂತಲೂ ಅಧಿಕವಾಗಲಿದೆಯೆಂದು ವರದಿ ತಿಳಿಸಿದೆ.

 ಬ್ರಿಟನ್‌ನಲ್ಲಿ ಈವರೆಗೆ ಕೊರೋನ ವೈರಸ್‌ನಿಂದ 71 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 20.30 ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ರಾಯ್ಟರ್ಸ್‌ ಸುದ್ದಿ ಸಂಸ್ಥೆ ಪ್ರಕಟಿಸಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News