ಪಾಕ್: ಮೂವರಲ್ಲಿ ರೂಪಾಂತರಿತ ಕೊರೋನ ಪತ್ತೆ
Update: 2020-12-29 23:38 IST
ಇಸ್ಲಾಮಾಬಾದ್,ಡಿ.29: ಬ್ರಿಟನ್‌ನಿಂದ ವಾಪಾಸಾಗಿರುವ ಮೂವರು ಪಾಕ್ ಪ್ರಜೆಗಳು ರೂಪಾಂತರಿತ ಕೊರೋನ ವೈರಸ್‌ನಿಂದ ಸೋಂಕಿತರಾಗಿದ್ದಾರೆಂದು ಪಾಕಿಸ್ತಾನವು ಮಂಗಳವಾರ ತಿಳಿಸಿದೆ.
ಬ್ರಿಟನ್‌ನಿಂದ ಸಿಂಧ್ ಪ್ರಾಂತಕ್ಕೆ 12 ಮಂದಿ ಆಗಮಿಸಿದ್ದು, ಅವರಲ್ಲಿ ಆರು ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಸಿಂಧ್ ಆರೋಗ್ಯ ಇಲಾಖೆ ತಿಳಿಸಿದೆ. ಅವರಲ್ಲಿ ಮೂವರು ರೂಪಾಂತರಿ ಕೊರೋನ ವೈರಸ್‌ನಿಂದ ಸೋಂಕಿತರಾಗಿರುವುದು ಮೊದಲ ಹಂತದ ಜೆನೋಟೈಪಿಂಗ್ ತಪಾಸಣೆಯಲ್ಲಿ ಕಂಡುಬಂದಿದೆಯೆಂದು ಅದು ಟ್ವೀಟಿಸಿದೆ.