×
Ad

ಆಕ್ಸ್‌ಫರ್ಡ್-ಅಸ್ಟ್ರಾಝೆನೆಕಾ ಲಸಿಕೆಗೆ ಬ್ರಿಟನ್ ಅನುಮೋದನೆ

Update: 2020-12-30 23:46 IST

ಲಂಡನ್,ಡಿ.30:ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ಹಾಗೂ ಆಸ್ಟ್ರಾಝೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಲಸಿಕೆಗೆ ಬ್ರಿಟನ್ ಬುಧವಾರ ಅನುಮೋದನೆ ನೀಡಿದೆ. ಇದರೊಂದಿಗೆ ಬ್ರಿಟನ್,ಆಕ್ಸ್‌ಫರ್ಡ್-ಅಸ್ಟ್ರಾಝೆನೆಕಾ ಲಸಿಕೆಗೆ ಅನುಮೋದನೆ ನೀಡಿದ ವಿಶ್ವದ ಮೊದಲ ದೇಶವೆನಿಸಿಕೊಂಡಿದೆ.

ಎರಡು ಹಂತಗಳ ಡೋಸ್ ನೀಡಿಕೆಯ ವ್ಯವಸ್ಥೆಗೆ ಬ್ರಿಟನ್ ಸರಕಾರ ಅನುಮತಿ ನೀಡಿದೆ. ಪ್ರಸಕ್ತ ಬ್ರಿಟನ್ 10 ಕೋಟಿ ಆಕ್ಸ್‌ಫರ್ಡ್-ಅಸ್ಟ್ರಾಝೆನೆಕಾ ಲಸಿಕೆಗಳಿಗಾಗಿ ಬೇಡಿಕೆ ಸಲ್ಲಿಸಿದೆಯೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News