ವೀಸಾ ನಿರ್ಬಂಧ ವಿಸ್ತರಣೆ: ಟ್ರಂಪ್

Update: 2020-12-31 17:33 GMT

ವಾಷಿಂಗ್ಟನ್, ಡಿ.31: ಅಮೆರಿಕದಲ್ಲಿ ಕಾನೂನು ಉಲ್ಲಂಘಿಸಿದ ತಮ್ಮ ಪ್ರಜೆಗಳನ್ನು ವಾಪಸು ಕರೆಸಿಕೊಳ್ಳಲು ನಿರಾಕರಿಸುವ ದೇಶಗಳಿಗೆ ವಿಧಿಸಲಾದ ವೀಸಾ ನಿರ್ಬಂಧವನ್ನು ವಿಸ್ತರಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇಂತಹ ರಾಷ್ಟ್ರಗಳಿಗೆ ವೀಸಾ ನಿರ್ಬಂಧದ ಅವಧಿ ಡಿಸೆಂಬರ್ 31ಕ್ಕೆ ಅಂತ್ಯವಾಗಬೇಕಿತ್ತು. ಆದರೆ ಪ್ರಸಕ್ತ ಕೊರೋನ ಸೋಂಕಿನ ಪಿಡುಗು ಹಾಗೂ ಅಮೆರಿಕನ್ನರ ಆರೋಗ್ಯಕ್ಕೆ ಎದುರಾಗಿರುವ ಅಪಾಯ ಮುಂದುವರಿದಿರುವುದರಿಂದ ,ಎಪ್ರಿಲ್ 10ರಂದು ಹೊರಡಿಸಿದ್ದ ಆದೇಶ ಅಧ್ಯಕ್ಷರು ಸಮಾಪ್ತಿಗೊಳಿಸುವ ವರೆಗೆ ಮುಂದುವರಿಯಲಿದೆ ಎಂದು ಬುಧವಾರ ಹೊರಡಿಸಿದ ಹೇಳಿಕೆಯಲ್ಲಿ ಟ್ರಂಪ್ ಹೇಳಿದ್ದಾರೆ. ಅಮೇರಿಕದಲ್ಲಿ ಕಾನೂನು ಉಲ್ಲಂಘಿಸಿದ ಆರೋಪ ಎದುರಿಸುತ್ತಿರುವವರನ್ನು ಮರಳಿ ಕರೆಸಿಕೊಳ್ಳಲು ನಿರಾಕರಿಸುವ ರಾಷ್ಟ್ರಗಳ ಬಗ್ಗೆ ರಾಷ್ಟ್ರೀಯ ಭದ್ರತಾ ಇಲಾಖೆ ನೀಡುವ ಮಾಹಿತಿಯ ಪ್ರಕಾರ, ಆ ದೇಶಗಳಿಗೆ ವೀಸಾ ನಿರ್ಬಂಧವನ್ನು ವಿಧಿಸುವ ಉಪಕ್ರಮ ಆರಂಭಿಸಲು ವಿದೇಶಾಂಗ ಕಾರ್ಯದರ್ಶಿಗೆ ಅಧಿಕಾರವಿದೆ ಎಂದು ಎಪ್ರಿಲ್ 10ರಂದು ಅಧ್ಯಕ್ಷ ಟ್ರಂಪ್ ಆದೇಶ ಹೊರಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News