ದಶಕಗಳ ನಂತರ ಮೊದಲ ಬಾರಿ ಭಾರತದಿಂದ ಅಕ್ಕಿ ಖರೀದಿಸಿದ ವಿಯೆಟ್ನಾಂ: ಕಾರಣವೇನು ಗೊತ್ತೇ?

Update: 2021-01-05 10:58 GMT

ಹೊಸದಿಲ್ಲಿ: ಜಗತ್ತಿನಲ್ಲಿ ಗರಿಷ್ಠ ಅಕ್ಕಿ ರಫ್ತು ಮಾಡುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿರುವ ವಿಯೆಟ್ನಾಂ ದಶಕಗಳ ನಂತರ ಮೊದಲ ಬಾರಿ ಭಾರತದಿಂದ  ಅಕ್ಕಿ ಖರೀದಿಸಲು ಆರಂಭಿಸಿದೆ.  ವಿಯೆಟ್ನಾಂನಲ್ಲಿ ಬೆಳೆಸಲಾಗುವ ಅಕ್ಕಿಯ ಬೆಲೆ ಕಳೆದ ಒಂಬತ್ತು ವರ್ಷ ಅವಧಿಯಲ್ಲಿಯೇ ಗರಿಷ್ಠ ಮಟ್ಟಕ್ಕೆ ತಲುಪಿರುವುದು ಹಾಗೂ ಸ್ಥಳೀಯವಾಗಿ ಸೀಮಿತ ಅಕ್ಕಿ ಸರಬರಾಜಾಗುತ್ತಿರುವುದರಿಂದ ಆ ದೇಶ ಇದೀಗ ಭಾರತದಿಂದ ಅಕ್ಕಿ ಆಮದುಗೊಳಿಸಲು ಆರಂಭಿಸಿದೆ.

ಜಗತ್ತಿನ ಅತಿ ದೊಡ್ಡ ಅಕ್ಕಿ ರಫ್ತುದಾರ ದೇಶವಾಗಿರುವ ಭಾರತದ  ವರ್ತಕರು ಈಗಾಗಲೇ  ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ವಿಯೆಟ್ನಾಂಗೆ  70,000 ಟನ್ ಅಕ್ಕಿ ರಫ್ತು ಮಾಡಲು ಒಪ್ಪಿದ್ದಾರೆ. ಮೊದಲ ಬಾರಿಗೆ ನಾವು ವಿಯೆಟ್ನಾಂಗೆ ಅಕ್ಕಿ ರಫ್ತು ಮಾಡುತ್ತಿದ್ದೇವೆ ಎಂದು ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಬಿ ವಿ ಕೃಷ್ಣ ರಾವ್ ಹೇಳಿದ್ದಾರೆ.

ವಿಯೆಟ್ನಾಂ ಅಕ್ಕಿ ಬೆಲೆ ಪ್ರತಿ ಟನ್‍ಗೆ  500ರಿಂದ 505 ಡಾಲರ್‍ನಷ್ಟಿದ್ದರೆ ಭಾರತದ ಅಕ್ಕಿಯ ಬೆಲೆ  ಟನ್‍ಗೆ 381ರಿಂದ 387 ಡಾಲರ್‍ನಷ್ಟಿದೆ. ಕಳೆದ ವರ್ಷ ಭಾರತ 14 ಮಿಲಿಯನ್ ಟನ್ ಅಕ್ಕಿಯನ್ನು ರಫ್ತುಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News