×
Ad

ಬದೌನ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ ಸಂಜೆ ಮನೆಯಿಂದ ಹೊರಹೋಗಬಾರದಿತ್ತು: ಮಹಿಳಾ ಆಯೋಗದ ಸದಸ್ಯೆ

Update: 2021-01-07 22:02 IST

ಹೊಸದಿಲ್ಲಿ: ಬದೌನ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೊಬ್ಬರು,  ಸಂಜೆ ವೇಳೆ ಮಹಿಳೆ ಮನೆಯಿಂದ ಹೊರಹೋಗದೆ ಇರುತ್ತಿದ್ದರೆ ಈ ಘಟನೆ ತಪ್ಪಿಸಬಹುದಿತ್ತು ಎಂಬ ಬಾಲಿಷ ಹೇಳಿಕೆ ನೀಡಿದ್ದಾರೆ.

ಬದೌನ್ ಜಿಲ್ಲೆಯಲ್ಲಿ ಗ್ಯಾಂಗ್ ರೇಪ್ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿಯಾಗುವಂತೆ ಮಹಿಳಾ ಆಯೋಗವು ಎನ್ ಸಿ ಡಬ್ಲ್ಯೂಸದಸ್ಯೆ ಚಂದ್ರಮುಖಿ ದೇವಿಯನ್ನು ಕಳುಹಿಸಿಕೊಟ್ಟಿತ್ತು.ಸುದ್ದಿಗಾರರೊಂದಿಗೆ ಮಾತನಾಡಿದ ದೇವಿ, "ಒಂದು ವೇಳೆ ಆಕೆ ಯಾರಾದರೊಬ್ಬರ ಒತ್ತಡ ಕ್ಕೆ ಒಳಗಾಗಿದ್ದರೆ  ಸಮಯದ ಬಗ್ಗೆ ನಿಗಾ ಇಡಬೇಕಿತ್ತು. ತಡವಾಗಿ ಮನೆಯಿಂದ ಹೊರಹೋಗಬಾರದಿತ್ತು. ಸಂತ್ರಸ್ತೆಯು ಸಂಜೆ ಏಕಾಂಗಿಯಾಗಿ ಹೋಗದಿದ್ದರೆ ಅಥವಾ ಕುಟುಂಬದ ಸದಸ್ಯರೊಂದಿಗೆ ಹೋಗಿದ್ದರೆ, ಆಕೆಯನ್ನು ಉಳಿಸಬಹುದಿತ್ತು'' ಎಂದರು.

ತನ್ನಹೇಳಿಕೆ ವಿವಾದದ ಸ್ವರೂಪ ಪಡೆಯುತ್ತಲ್ಲೆ ಪ್ರತಿಕ್ರಿಯಸಿದ ದೇವಿ, "ಯಾರಿಗಾದರೂ ನೋವಾಗಿದ್ದರೆ ತನ್ನ ಹೇಳಿಕೆಯನ್ನು ಹಿಂಪಡೆಯುತ್ತೇನೆ'' ಎಂದು ಹೇಳಿದ್ದಾರೆ.

"ಎನ್ ಸಿ ಡಬ್ಲ್ಲ್ಯು ಸದಸ್ಯೆ ಈ ರೀತಿಯ ಹೇಳಿಕೆ ಏಕೆ ನೀಡಿದ್ದಾರೋ ಗೊತ್ತಿಲ್ಲ.  ಮಹಿಳೆ ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಹೋಗುವ ಹಕ್ಕಿದೆ. ಮಹಿಳೆಗೆ ಸುರಕ್ಷೆ ನೀಡುವುದು ಸಮಾಜದ ಹಾಗೂ ರಾಜ್ಯದ ಕರ್ತವ್ಯವಾಗಿದೆ'' ಎಂದು ಎನ್ ಸಿ ಡಬ್ಲ್ಲ್ಯುಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

ಘಟನೆ ಸಂಬಂಧ  ದೇವಸ್ಥಾನದ ಅರ್ಚಕ ಸಹಿತ ಮೂವರನ್ನು ಬಂಧಿಸಲಾಗಿದೆ. ಆಕೆ ದೇವಳದ ಪ್ರಾಂಗಣದಲ್ಲಿರುವ ಪಾಳು ಬಾವಿಗೆ ಬಿದ್ದಿದ್ದಳು ಎಂದು ಹೇಳಿ ಆಕೆಯ ಕಳೇಬರವನ್ನು ಆಕೆಯ ಕುಟುಂಬಕ್ಕೆ ಆರೋಪಿಗಳು  ಅದೇ ದಿನ ರಾತ್ರಿ ಹಸ್ತಾಂತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News