ಅಮೆಝಾನ್‌ ನ ಜೆಫ್‌ ಬೆಝೋಸ್‌ ರನ್ನು ಹಿಂದಿಕ್ಕಿ ವಿಶ್ವದ ನಂ.1 ಶ್ರೀಮಂತ ಸ್ಥಾನಕ್ಕೇರಿದ ಎಲಾನ್‌ ಮಸ್ಕ್‌

Update: 2021-01-07 17:46 GMT

ನ್ಯೂಯಾರ್ಕ್‌,ಜ.07: ಅಮೆಝಾನ್‌ ನ ಸ್ಥಾಪಕ ಜೆಫ್‌ ಬೆಝೋಸ್‌ ಇದುವರೆಗೂ ವಿಶ್ವದ ಅತೀ ಶ್ರೀಮಂತರ ಪೈಕಿ ಮೊದಲ ಸ್ಥಾನವನ್ನು ಅಲಂಕರಿಸಿದ್ದರು. ಇದೀಗ ಅವರನ್ನು ಹಿಂದಿಕ್ಕಿದ ಖ್ಯಾತ ಉದ್ಯಮಿ, ಟೆಸ್ಲಾ ಎಲೆಕ್ಟ್ರಿಕ್‌ ಕಾರು ಕಂಪೆನಿ ಹಾಗೂ ಸ್ಪೇಸ್‌ ಎಕ್ಸ್‌ ಬಾಹ್ಯಾಕಾಶ ಕಂಪೆನಿಯ ಸ್ಥಾಪಕ ಎಲಾನ್‌ ಮಸ್ಕ್‌ ವಿಶ್ವದ ಅತೀ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ ಎಂದು ಬ್ಲೂಮ್‌ ಬರ್ಗ್‌ ತನ್ನ ವರದಿಯಲ್ಲಿ ತಿಳಿಸಿದೆ.

ಟೆಸ್ಲಾ ಕಂಪೆನಿಯ ಶೇರುಗಳಲ್ಲಿ 4.8% ಹೆಚ್ಚಳವಾದ ಕಾರಣ ಅವರು ಅಮೆಝಾನ್‌ ಸ್ಥಾಪಕನನ್ನ ಹಿಂದಿಕ್ಕಿದ್ದಾರೆ ಎಂದು ವರದಿ ತಿಳಿಸಿದೆ. ಜೆಫ್ ಬೆಝೋಸ್ ಗಿಂತ ಎಲಾನ್ ಮಸ್ಕ್ ರ ಆಸ್ತಿಯಲ್ಲಿ 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದ್ದು, ಸದ್ಯ ಅವರ ಆಸ್ತಿಯು 188.5 ಬಿಲಿಯನ್ ಡಾಲರ್ ಗೇರಿದೆ.

ಭಾರತದಲ್ಲಿ ರಾಕೆಟ್‌ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಇಸ್ರೋ ಸರಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಎಲಾನ್‌ ಮಸ್ಕ್‌ ರ ಸ್ಪೇಸ್‌ ಎಕ್ಸ್‌ ಅವರದ್ದೇ ಖಾಸಗಿ ಸಂಸ್ಥೆಯಾಗಿದೆ. ಅಮೆಝಾನ್‌ ನ ಜೆಫ್‌ ಬೆಝೋಸ್‌ ಕೂಡಾ ಬ್ಲೂ ಒರಿಜಿನ್‌ ಎಂಬ ರಾಕೆಟ್‌ ಉಡ್ಡಯನ ಹಾಗೂ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯನ್ನು ಹೊಂದಿದ್ದಾರೆ. ಅತೀ ಶೀಘ್ರವಾಗಿ ಶ್ರೀಮಂತರ ಪಟ್ಟಿಗೆ ಸೇರಿದವರ ಸಾಲಿನಲ್ಲಿ ಮೊದಲಿಗರಾಗಿ ಎಲಾನ್‌ ಮಸ್ಕ್‌ ಇತಿಹಾಸ ಸೃಷ್ಟಿಸಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News