ಕ್ರಿಕೆಟ್ ಅಭಿಮಾನಿಯೊಬ್ಬ ತನ್ನ ಅರ್ಧ ಮೀಸೆಯನ್ನು ಬೋಳಿಸಿದ್ದಾನೆ, ಕಾರಣವೇನು ಗೊತ್ತಾ?

Update: 2021-01-09 17:23 GMT

ಬೆಂಗಳೂರು: ಕ್ರಿಕೆಟ್ ಭಾರತದಲ್ಲಿ ಹೆಚ್ಚು ಇಷ್ಟಪಡುವ ಕ್ರೀಡೆಯಾಗಿದೆ. ಅಭಿಮಾನಿಗಳು ಕ್ರೀಡೆಯ ಮೇಲಿನ ತಮ್ಮ ಪ್ರೀತಿಯನ್ನು ಸಾಬೀತುಪಡಿಸಲು ಯಾವ ಮಟ್ಟಕ್ಕೂ ತಲುಪಬಹುದು ಎನ್ನುವುದಕ್ಕೆ ಬೆಂಗಳೂರಿನಲ್ಲಿರುವ ಈ ಕ್ರಿಕೆಟ್ ಅಭಿಮಾನಿಯೊಬ್ಬ ಪ್ರತ್ಯಕ್ಷ ಸಾಕ್ಷಿಯಾಗಿದ್ದಾನೆ. ಅಜಯ್ ಎಂಬ ಅಭಿಮಾನಿ ತನ್ನ ಅರ್ಧ ಮೀಸೆಯನ್ನು ಬೋಳಿಸಿದ್ದಾನೆ? ಇದಕ್ಕೆ ಕಾರಣವೇನು ಗೊತ್ತೇ?

ಈ ಅಭಿಮಾನಿ  ಟೆಸ್ಟ್ ಕ್ರಿಕೆಟಿಗ ರೋಹಿತ್ ಅವರು ಆಸ್ಟ್ರೇಲಿಯ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹೇಝಲ್‌ವುಡ್ ಹಾಗೂ ಪ್ಯಾಟ್ ಕಮಿನ್ಸ್ ವಿರುದ್ಧ 30 ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದರೆ ತನ್ನ ಅರ್ಧ ಮೀಸೆಯನ್ನು ಬೋಳಿಸುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದ. ಶುಕ್ರವಾರ 26 ರನ್‌ಗೆ ಔಟಾಗಿದ್ದ ರೋಹಿತ್ ಶರ್ಮಾ 77 ಎಸೆತಗಳನ್ನು ಎದುರಿಸಿದ್ದಾರೆ. ಅಭಿಮಾನಿ ತನ್ನ ಭರವಸೆಯ ಪ್ರಕಾರವೇ ತನ್ನ ಅರ್ಧ ಮೀಸೆಯನ್ನು ಬೋಳಿಸಿದ್ದಾನೆ.

ರೋಹಿತ್ ಶರ್ಮಾ ಮೂರನೇ ಟೆಸ್ಟ್‌ನಲ್ಲಿ ಚೆನ್ನಾಗಿ ಆಡಲಾರರು ಎಂದು ವಾದಿಸಿದ್ದ ಅಜಯ್ ಆಡುವ 11ರ ಬಳಗಕ್ಕೆ ರೋಹಿತ್‌ರನ್ನು ಆಯ್ಕೆ ಮಾಡಿರುವ ನಿರ್ಧಾರವನ್ನು ಟೀಕಿಸಿದ್ದರು. "ರೋಹಿತ್‌ರನ್ನು ಟೆಸ್ಟ್ ಕ್ರಿಕೆಟಿಗ ಎಂದು ಪರಿಗಣಿಸುವುದಾದರೆ ನಾನು ವಿಶ್ವದಲ್ಲಿ ಹೆಚ್ಚು ಸುಂದರ ವ್ಯಕ್ತಿ ಯಾಗಿದ್ದೇನೆ'' ಎಂದು ಟ್ವೀಟಿಸಿದ್ದ ಅಜಯ್, ರೋಹಿತ್ ಆಸ್ಟ್ರೇಲಿಯ ಬೌಲರ್‌ಗಳ 30 ಎಸೆತವನ್ನು ದಿಟ್ಟವಾಗಿ ಎದುರಿಸಿದರೆ ನನ್ನ ಅರ್ಧ ಮೀಸೆ ಬೋಳಿಸುವ ಸವಾಲು ಹಾಕಿದ್ದ. ಆ ಸವಾಲಿನಂತೆ ನಡೆದುಕೊಂಡಿದ್ದಾನೆ.

ಅಭಿಮಾನಿ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಟ್ವಿಟ್ಟರ್ ಚಿತ್ರವನ್ನು ಪೋಸ್ಟ್ ಮಾಡಿದ್ದಾನೆ. 

ರೋಹಿತ್  ಶುಕ್ರವಾರ 77 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಿಡಿಸಿದ್ದರು. ಕಳಪೆ ಬ್ಯಾಟಿಂಗ್ ಮಾಡಿದ್ದಕ್ಕೆ ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗಿದ್ದಾರೆ. ಈ ಮಧ್ಯೆ ಅವರು ಆಸ್ಟ್ರೇಲಿಯ ವಿರುದ್ಧ ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಲ್ಲಿ 100 ಸಿಕ್ಸರ್‌ಗಳನ್ನು ಸಿಡಿಸಿದ ಮೊದಲ ಕ್ರಿಕೆಟಿಗನೆಂಬ ಸಾಧನೆ ಮಾಡಿ ಶ್ಲಾಘನೆಗೆ ಒಳಗಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News