×
Ad

ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ವಿರುದ್ಧ ಪುದುಚೇರಿ ಸಿಎಂ ಪ್ರತಿಭಟನೆ

Update: 2021-01-10 23:02 IST

ಪುದುಚೇರಿ, ಜ. 10: ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ, ಬೇಡಿ ಚುನಾಯಿತ ಸರಕಾರ ಕಾರ್ಯ ನಿರ್ವಹಿಸಲು ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದಿದ್ದಾರೆ. ಅಲ್ಲದೆ, ಕೇಂದ್ರ ಸರಕಾರ ಅವರನ್ನು ಹಿಂದೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರ ಪ್ರತಿಭಟನೆ ರವಿವಾರ ಮೂರನೇ ದಿನಕ್ಕೆ ಕಾಲಿರಿಸಿದೆ. ‘‘ಅವರು ಚುನಾಯಿತ ಸರಕಾರ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ. ದಿನ ನಿತ್ಯದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ’’ ಎಂದು ನಾರಾಯಣ ಸ್ವಾಮಿ ಅವರು ಹೇಳಿದ್ದಾರೆ. ಕಿರಣ್ ಬೇಡಿ ಅವರ ಅಧಿಕೃತ ನಿವಾಸದ ಸಮೀಪದ ರಸ್ತೆಯಲ್ಲಿ ನಾರಾಯಣ ಸ್ವಾಮಿ ಅವರು ‘ಗೋ ಬ್ಯಾಕ್ ಬೇಡಿ’ ಎಂಬ ಪ್ರದರ್ಶನಾ ಫಲಕ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು.

ಇತರ ಪ್ರತಿಭಟನಕಾರರು ‘‘ಬೇಡಿ ಯು ಗೋ, ಬೇಡಿ ಯು ಗೋ’’ ಎಂಬ ಪ್ರದರ್ಶನ ಫಲಕ ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ಪುದುಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸೆಕ್ಯುಲರ್ ಡೆಮಾಕ್ರೆಟಿಕ್ ಅಲಯನ್ಸ್ (ಎಸ್‌ಡಿಎ) ಸರಕಾರದ ನೇತೃತ್ವವನ್ನು ನಾರಾಯಣ ಸ್ವಾಮಿ ಅವರ ವಹಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News