ಬಂಧಿತ ಚೀನಾ ಯೋಧನನ್ನು ಚೀನಾಕ್ಕೆ ಹಸ್ತಾಂತರಿಸಿದ ಭಾರತದ ಸೇನೆ

Update: 2021-01-11 17:07 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಜ. 12: ಪೂರ್ವ ಲಡಾಕ್‌ನ ಪಾಂಗೋಗ್ ತ್ಸೋನ ದಕ್ಷಿಣ ದಂಡೆಯಲ್ಲಿ ಬಂಧಿಸಲಾದ ಚೀನಾ ಯೋಧನನ್ನು ಭಾರತೀಯ ಸೇನೆ ಸೋಮವಾರ ಚೀನಾ ಸೇನಾ ಪಡೆಗೆ ಹಸ್ತಾಂತರಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನ ಚುಸುಲ್-ಮೋಲ್ಡೊ ಗಡಿಯಲ್ಲಿ ಬೆಳಗ್ಗೆ 10.10ಕ್ಕೆ ಈ ಯೋಧ ಚೀನಾಕ್ಕೆ ಮರಳಿದ್ದಾನೆ ಎಂದು ಅದು ತಿಳಿಸಿದೆ.

ವಾಸ್ತವ ಗಡಿ ನಿಯಂತ್ರಣ ರೇಖೆಯ ಭಾರತೀಯ ಭಾಗದೊಳಗೆ ಪ್ರವೇಶಿಸಿದ ಬಳಿಕ ಪಾಂಗೋಂಗ್ ಸರೋವರದ ದಕ್ಷಿಣ ದಂಡೆಯಿಂದ ಚೀನಾ ಯೋಧನನ್ನು ಶುಕ್ರವಾರ ಮುಂಜಾನೆ ಸೆರೆ ಹಿಡಿಯಲಾಗಿತ್ತು.

‘‘ಚೀನಾ ಯೋಧನನ್ನು ಜನವರಿ 8 ರಂದು ಬಂಧಿಸಲಾಗಿತ್ತು. ಸೋಮವಾರ ಬೆಳಗ್ಗೆ 10.10ಕ್ಕೆ ಚುಸುಲ್-ಮೋಲ್ಡೋದಲ್ಲಿ ಚೀನಾಕ್ಕೆ ಹಸ್ತಾಂತರಿಸಲಾಯಿತು’’ ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನ ಗಡಿಯಲ್ಲಿ ಕಳೆದ 8 ತಿಂಗಳಿಂದ ಭಾರತ ಹಾಗೂ ಚೀನಾ ಸೇನಾ ಪಡೆಗಳ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಪಾಂಗೋಂಗ್ ಸರೋವರ ಪ್ರದೇಶದಲ್ಲಿ ಉಭಯ ಕಡೆಗಳ ನಡುವೆ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಕಳೆದ ಮೇಯಿಂದ ಉಭಯ ಸೇನೆಗಳ ನಡುವೆ ಮುಖಾಮುಖಿ ಆರಂಭವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News