​ಇಂಡಿಗೊ ಪಾಟ್ನಾ ವಿಮಾನ ನಿಲ್ದಾಣ ವ್ಯವಸ್ಥಾಪಕ ಗುಂಡಿಗೆ ಬಲಿ

Update: 2021-01-13 03:42 GMT
ಸಾಂದರ್ಭಿಕ ಚಿತ್ರ

ಪಾಟ್ನಾ : ಇಂಡಿಗೊ ವಿಮಾನಯಾನ ಸಂಸ್ಥೆಯ ಪಾಟ್ನಾ ವಿಮಾನ ನಿಲ್ದಾಣ ವ್ಯವಸ್ಥಾಪಕರನ್ನು ಅಪರಿಚಿತ ಬಂದೂಕುಧಾರಿಗಳು ಮಂಗಳವಾರ ರಾತ್ರಿ ಗುಂಡಿಟ್ಟು ಸಾಯಿಸಿದ್ದಾರೆ.

"ನಮ್ಮ ಸಂಸ್ಥೆಯ ಪಾಟ್ನಾ ವಿಮಾನ ನಿಲ್ದಾಣ ವ್ಯವಸ್ಥಾಪಕರನ್ನು ಗುಂಡಿಟ್ಟು ಸಾಯಿಸಿದ ಘಟನೆಯಿಂದ ತೀರಾ ನೋವಾಗಿದೆ" ಎಂದು ಇಂಡಿಯೊ ಹೇಳಿಕೆ ನೀಡಿದೆ.

"ಅವರ ಕುಟುಂಬ ಮತ್ತು ಪ್ರೀತಿಪಾತ್ರರ ಜತೆ ನಾವಿದ್ದೇವೆ. ಅವರ ಕುಟುಂಬದ ಜತೆಗೆ ಸಂಪರ್ಕದಲ್ಲಿದ್ದು, ಎಲ್ಲ ಅಗತ್ಯ ನೆರವನ್ನು ನೀಡುತ್ತೇವೆ. ಘಟನೆ ಬಗ್ಗೆ ನಡೆಯುತ್ತಿರುವ ತನಿಖೆಗೆ ಸೂಕ್ತ ಸಹಕಾರ ನೀಡಲಿದ್ದೇವೆ" ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ಮಂಗಳವಾರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಾಗ ಅವರ ಮನೆಯ ಹೊರಗೆ ಅಪರಿಚಿತರು ಹಲವು ಬಾರಿ ಗುಂಡು ಹಾರಿಸಿ ಸಾಯಿಸಿದ್ದಾರೆ ಎಂದು ವಿಮಾನಯಾನ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News