ಸಿರಿಯ ಮೇಲೆ ಇಸ್ರೇಲ್ ದಾಳಿ; 40 ಸಾವು

Update: 2021-01-13 16:20 GMT
ಸಾಂದರ್ಭಿಕ ಚಿತ್ರ

ಬೈರೂತ್ (ಲೆಬನಾನ್), ಜ. 13: ಶಸ್ತ್ರಾಸ್ತ್ರ ಡಿಪೋಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಪೂರ್ವ ಸಿರಿಯದಲ್ಲಿ ರಾತ್ರಿ ಹೊತ್ತಿನಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ 9 ಸಿರಿಯ ಸೈನಿಕರು ಮತ್ತು ಅದರ 31 ಬಾಡಿಗೆ ಸೈನಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ಬುಧವಾರ ತಿಳಿಸಿದೆ.

ಸಿರಿಯದ ಪೂರ್ವ ಪಟ್ಟಣ ಡೈರ್ ಎಝರ್ ಮತ್ತು ಇರಾಕ್ ಗಡಿ ನಡುವಿನ ವ್ಯಾಪ್ತಿಯಲ್ಲಿ ಇಸ್ರೇಲ್ ವಾಯುಪಡೆಯು 18ಕ್ಕೂ ಅಧಿಕ ದಾಳಿಗಳನ್ನು ನಡೆಸಿದೆ ಎಂದು ಅದು ಹೇಳಿದೆ.

ಈ ವಲಯದಲ್ಲಿ ಲೆಬನಾನ್‌ನ ಹಿಝ್ಬುಲ್ಲಾ ಮೂವ್‌ಮೆಂಟ್ ಮತ್ತು ಇರಾನ್ ಪರ ಅಫ್ಘಾನ್ ಬಾಡಿಗೆ ಸೈನಿಕರನ್ನು ಒಳಗೊಂಡ ಫಾತಿಮಿದ್ ಬ್ರಿಗೇಡ್‌ಗೆ ಸೇರಿದ ಸೈನಿಕರು ಕಾರ್ಯಾಚರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News