ಬ್ರಿಟನ್ ವೈರಸ್ 50 ದೇಶದಲ್ಲಿ, ದ. ಆಫ್ರಿಕ ಮಾದರಿ 20 ದೇಶಗಳಲ್ಲಿ ಹರಡಿದೆ: ವಿಶ್ವಸಂಸ್ಥೆ

Update: 2021-01-13 16:58 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 13: ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಿತ ಕೊರೋನ ವೈರಸ್ ಈಗ 50 ದೇಶಗಳಿಗೆ ಹರಡಿದೆ ಹಾಗೂ ದಕ್ಷಿಣ ಆಫ್ರಿಕದಲ್ಲಿ ಮೊದಲು ಪತ್ತೆಯಾದ ಕೊರೋನ ವೈರಸ್ ಪ್ರಭೇದವು 20 ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಅದೇ ವೇಳೆ, ಜಪಾನ್‌ನಲ್ಲಿ ಪತ್ತೆಯಾಗಿರುವ ಮೂರನೇ ರೂಪಾಂತರಿತ ಕೊರೋನ ವೈರಸ್ ಮಾದರಿಯು ದೇಹದ ರೋಗ ನಿರೋಧಕ ವ್ಯವಸ್ಥೆಯು ಕೆಲಸದ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಅದು ಹೇಳಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎಂದಿದೆ.

‘‘ಕೊರೋನ ವೈರಸ್ ಹೆಚ್ಚೆಚ್ಚು ಹರಡಿದಷ್ಟು, ರೂಪಾಂತರಗೊಳ್ಳಲು ಅದಕ್ಕೆ ಲಭಿಸುವ ಅವಕಾಶಗಳೂ ಹೆಚ್ಚುತ್ತವೆ. ಗರಿಷ್ಠ ಮಟ್ಟದಲ್ಲಿ ಸೋಂಕು ಹರಡಿದೆಯೆಂದರೆ, ಕೊರೋನ ವೈರಸ್‌ನ ಹೆಚ್ಚಿನ ರೂಪಾಂತರಿಕ ಪ್ರಭೇದಗಳು ಹೊರಹೊಮ್ಮುತ್ತವೆ ಎಂದು ನಾವು ತಿಳಿಯಬೇಕು’’ ಎಂದು ತನ್ನ ವಾರದ ವರದಿಯಲ್ಲಿ ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News