ಬ್ರಿಸ್ಬೇನ್‌ನಲ್ಲಿ ಅಂತಿಮ ಟೆಸ್ಟ್‌ಗೆ ರಹಾನೆ ತಂಡ ತಯಾರಿ

Update: 2021-01-14 05:34 GMT

 ಬ್ರಿಸ್ಬೇನ್, ಜ. 13:ಕಿಬ್ಬೊಟ್ಟೆಯ ಒತ್ತಡದಿಂದ ಕೊನೆಯ ಟೆಸ್ಟ್‌ನಿಂದ ಹೊರಗುಳಿದ ಭಾರತ ಕ್ರಿಕೆಟ್ ತಂಡದ ವೇಗಿ ಜಸ್‌ಪ್ರೀತ್ ಬುಮ್ರಾ ಅಂತಿಮ ಟೆಸ್ಟ್‌ಗೆ ಅಭ್ಯಾಸ ನಿರತ ತಂಡದೊಂದಿಗೆ ಕಾಣಿಸಿಕೊಂಡಿದ್ದಾರೆ.  

 ಆಸ್ಟ್ರೇಲಿಯ ವಿರುದ್ಧದ ನಿರ್ಣಾಯಕ ನಾಲ್ಕನೇ ಟೆಸ್ಟ್‌ನಲ್ಲಿ 11 ಫಿಟ್ ಆಟಗಾರರನ್ನು ಕಣಕ್ಕಿಳಿಸುವ ಆಶಯದೊಂದಿಗೆ ಗಾಯದ ಸಮಸ್ಯೆ ಎದುರಿಸುತ್ತಿರುವ ಭಾರತದ ತಂಡವು ಬುಧವಾರ ಗಬ್ಬಾದಲ್ಲಿ ತನ್ನ ಮೊದಲ ತರಬೇತಿಯನ್ನು ಆರಂಭಿಸಿದೆ. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ನಾಯಕ ಅಜಿಂಕ್ಯ ರಹಾನೆ ಮತ್ತು ಇತರರು ತಮ್ಮ ತರಬೇತಿ ಕಿಟ್‌ಗಳೊಂದಿಗೆ ಕಾಣಿಸಿಕೊಂಡರು.

ಬೌಲಿಂಗ್ ಕೋಚ್ ಭರತ್ ಅರುಣ್ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿದ್ದರಿಂದ ಬುಮ್ರಾ ಅವರು ತಮ್ಮ ಅಭ್ಯಾಸ ಉಡುಪಿನಲ್ಲಿ ಇರಲಿಲ್ಲ.

 ಸಿಡ್ನಿಯಲ್ಲಿ ನಡೆದ ತೀವ್ರ ಹೋರಾಟದ ಮೂಲಕ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿದ ಭಾರತ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತದ ಆಟಗಾರರು ತಯಾರಿ ಪ್ರಾರಂಭಿಸಿದ್ದಾರೆ.

  ಬೌಲರ್ ಕುಲದೀಪ್ ಯಾದವ್ ನೆಟ್‌ನಲ್ಲಿ ಬೌಲಿಂಗ್ ನಡೆಸಿದರು. ಪ್ರಭಾವಶಾಲಿ ಆಲ್‌ರೌಂಡರ್ ರವೀಂದ್ರ ಜಡೇಜ ಹೆಬ್ಬೆರಳಿನ ಮುರಿತದಿಂದಾಗಿ ಕಳೆದ ಪಂದ್ಯದ ಮೂರನೇ ದಿನ ತೊಂದರೆ ಅನುಭವಿಸಿ ಪಂದ್ಯದಿಂದ ಹೊರ ನಡೆದಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಅವರು ಆಡುವ ಸಾಧ್ಯತೆ ಇದೆ.

  ಅಭ್ಯಾಸದ ವೇಳೆ ಸೀಮರ್ ಶಾರ್ದುಲ್ ಠಾಕೂರ್ ಮತ್ತು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಇದ್ದರು. ಟಿ.ನಟರಾಜನ್ ಅಥವಾ ಶಾರ್ದುಲ್ ಠಾಕೂರ್ ಅವರನ್ನು ಬುಮ್ರಾ ಬದಲಿಗೆ ಅಂತಿಮ ಆಡುವ ಇಲೆವೆನ್‌ನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಮೊಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿ ಅವರೊಂದಿಗೆ ಬೌಲಿಂಗ್ ದಾಳಿಗೆ ಸಾಥ್ ನೀಡಲಿದ್ದಾರೆ.

ಬೌಲಿಂಗ್ ಕೋಚ್ ಅರುಣ್ ಅವರಲ್ಲದೆ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮತ್ತು ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಅವರನ್ನೂ ಒಳಗೊಂಡಂತೆ ಶಾಸ್ತ್ರಿ ಉಳಿದ ಸಹಾಯಕ ಸಿಬ್ಬಂದಿಯೊಂದಿಗೆ ಅಂತಿಮ ಪಂದ್ಯಕ್ಕೆ ತಯಾರಿ ಬಗ್ಗೆ ಚರ್ಚಿಸುತ್ತಿದ್ದಾರೆ.

ಆಸ್ಟ್ರೇಲಿಯ ಪ್ರವಾಸದಲ್ಲಿ ಭಾರತ ತಂಡದ ಹಲವು ಮಂದಿ ಗಾಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲೇ ಗಾಯದಿಂದಾಗಿ ತಂಡದಿಂದ ದೂರವಾಗಿದ್ದರು.

ತೋಳು ಮುರಿತದ ಗಾಯದ ಕಾರಣ ಮೊಹಮ್ಮದ್ ಶಮಿಗೆ ಮೊದಲ ಟೆಸ್ಟ್ ನಂತರ ಸರಣಿಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ಉಮೇಶ್ ಯಾದವ್ ಗಾಯದ ಸಮಸ್ಯೆಯಿಂದಾಗಿ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಗಾಯದಿಂದ ಸಮಸ್ಯೆ ಎದುರಿಸುತ್ತಿದ್ದರೂ ರವಿಚಂದ್ರನ್ ಅಶ್ವಿನ್ ಮತ್ತು ಹನುಮ ವಿಹಾರಿ ಅವರು ಸಿಡ್ನಿಯಲ್ಲಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸುವ ಹೋರಾಟದಲ್ಲಿ ಭಾರತಕ್ಕೆ ಸಹಾಯ ಮಾಡಿದರು. ಆದರೆ ಅಂತಿಮ ಪಂದ್ಯದಲ್ಲಿ ಅವರ ಭಾಗವಹಿಸುವುದು ಇನ್ನೂ ಖಚಿತವಾಗಿಲ್ಲ.

ಸಿಡ್ನಿಯಲ್ಲಿ ವಿಕೆಟ್ ಕೀಪರ್ ರಿಷಭ್ ಪಂತ್ ಉತ್ತಮ ಫಾರ್ಮ್‌ನೊಂದಿಗೆ 97 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News