ಅಬುಧಾಬಿ ಓಪನ್ ಟೆನಿಸ್ : ಸಬಲೆಂಕಾ ಚಾಂಪಿಯನ್

Update: 2021-01-14 05:37 GMT

 ಅಭುದಾಬಿ, ಜ.13: ಬೆಲಾರಸ್‌ನ ಆಟಗಾರ್ತಿ ಅಬುಧಾಬಿ ಓಪನ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಆರ್ಯನಾ ಸಬಲೆಂಕಾ ಅವರು ವೆರೋನಿಕಾ ಕುಡರ್ಮೆಟೊವಾರನ್ನು ನೇರ ಸೆಟ್‌ಗಳಿಂದ ಸೋಲಿ 3ನೇ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

 ಈ ಗೆಲುವಿನೊಂದಿಗೆ ಸಬಲೆಂಕಾ ಮಹಿಳೆಯರ ವಿಶ್ವವ ಟೆನಿಸ್ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ. ಅಬುಧಾಬಿ ಓಪನ್ ಫೈನಲ್‌ನಲ್ಲಿ ಬುಧವಾರ 6-2, 6-2 ಸೆಟ್‌ಗಳಿಂದ ವೆರೋನಿಕಾ ಕುಡರ್ಮೆಟೊವಾ ಅವರನ್ನು ಮಣಿಸುವ ಮೂಲಕ ಆರ್ಯನಾ ಸಬಲೆಂಕಾ ತನ್ನ ಮೂರನೇ ನೇರ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಅಬುಧಾಬಿಯಲ್ಲಿ ಇದೇ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದಾರೆ.

ಕಳೆದ ಋತುವಿನ ಕೊನೆಯಲ್ಲಿ ಒಸ್ಟ್ರಾವಾ ಮತ್ತು ಲಿನ್ಜ್‌ನಲ್ಲಿ ಒಳಾಂಗಣ ಪಂದ್ಯಾವಳಿಗಳನ್ನು ಗೆದ್ದ ನಾಲ್ಕನೇ ಶ್ರೇಯಾಂಕದ ಬೆಲರೂಸಿಯನ್ ಅಕ್ಟೋಬರ್‌ನಲ್ಲಿ ನಡೆದ ಫ್ರೆಂಚ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಕೊನೆಯದಾಗಿ ಸೋಲು ಅನುಭವಿಸಿದ್ದರು.

  ಕೊರೋನ ವೈರಸ್ ಸಾಂಕ್ರಾಮಿಕದ ಮಧ್ಯೆ ಫೆಬ್ರವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನ್ನು ಮರು ನಿಗದಿಪಡಿಸಿದ ನಂತರ ವಿಶ್ವ ಟೆನಿಸ್ ಫೆಡರೇಶನ್ ಅಭ್ಯಾಸಕ್ಕೆ ಹೆಚ್ಚು ಅವಕಾಶ ನೀಡಲು ಅಬುಧಾಬಿ ಓಪನ್ ಟೆನಿಸ್ ಟೂರ್ನಮೆಂಟ್‌ನ್ನು ಆಯೋಜಿಸಿತ್ತು.

ಸಬಲೆಂಕಾ ಮತ್ತು ಕುಡರ್ಮೆಟೊವಾ ಈಗ ಆಸ್ಟ್ರೇಲಿಯಕ್ಕೆ ಪ್ರಯಾಣಿಸಲಿದ್ದು, ಅಲ್ಲಿ ಅವರು ಆಸ್ಟ್ರೇಲಿಯನ್ ಓಪನ್ ಮತ್ತು ಅದರ ತಯಾರಿಗೆ ಮುಂಚಿತವಾಗಿ ಸೀಮಿತ ಅಭ್ಯಾಸ ಅವಕಾಶಗಳೊಂದಿಗೆ ಕ್ವಾರಂಟೈನ್‌ನಲ್ಲಿ ಕಳೆಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News